➤ ಭಾರತ-ಕೀನ್ಯಾ ಆರೋಗ್ಯ ವಲಯದ ಸಹಕಾರ (India-Kenya Health Relations):
- ಆಫ್ರಿಕಾ ಸಿಸಿಡಿಸಿ ನೆರವು: ಮೇ ಮತ್ತು ಜೂನ್ 2026ರಲ್ಲಿ ಭಾರತವು 'ಆಫ್ರಿಕಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳಿಗೆ' (Africa CDC) 45 ಟನ್‌ಗೂ ಹೆಚ್ಚು ವೈದ್ಯಕೀಯ ನೆರವನ್ನು ನೀಡಿತ್ತು.
- ವ್ಯಾಕ್ಸಿನ್ ಮೈತ್ರಿ (Vaccine Maitri): ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತವು ತನ್ನ 'ವ್ಯಾಕ್ಸಿನ್ ಮೈತ್ರಿ' ಉಪಕ್ರಮದಡಿಯಲ್ಲಿ ಕೀನ್ಯಾಗೆ 11.2 ಲಕ್ಷ (1.12 Million) ಮೇಡ್-ಇನ್-ಇಂಡಿಯಾ ಲಸಿಕೆ ಡೋಸ್‌ಗಳನ್ನು ಪೂರೈಸಿತ್ತು.
- ವೈದ್ಯಕೀಯ ಉಪಕರಣಗಳ ಅನುದಾನ:
- ನೈರೋಬಿಯ 'ಕೆನ್ಯಾಟ್ಟಾ ನ್ಯಾಷನಲ್ ಆಸ್ಪತ್ರೆ'ಗೆ ಭಾರತದ ಭಾಭಾಟ್ರಾನ್ (Bhabhatron) ರೇಡಿಯೋಥೆರಪಿ ಯಂತ್ರ.
- ಮೊಂಬಾಸಾದಲ್ಲಿರುವ 'ಕೀನ್ಯಾ ನೇವಿ ಆಸ್ಪತ್ರೆ'ಗೆ ರೋಗನಿರ್ಣಯ ಉಪಕರಣಗಳು (Diagnostic Equipment).
- ಔಷಧ ಮಾರುಕಟ್ಟೆ ಮತ್ತು ವೈದ್ಯಕೀಯ ಪ್ರವಾಸೋದ್ಯಮ:
- ಕೀನ್ಯಾದ ಔಷಧೀಯ ಮಾರುಕಟ್ಟೆಯ ಶೇಕಡಾ 50ಕ್ಕೂ ಹೆಚ್ಚು ಭಾಗವನ್ನು ಭಾರತೀಯ ಫಾರ್ಮಾ ಉತ್ಪನ್ನಗಳು ಹೊಂದಿವೆ.
- ಪ್ರತಿ ವರ್ಷ 10,000ಕ್ಕೂ ಹೆಚ್ಚು ಕೀನ್ಯನ್ನರು ಸುಧಾರಿತ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡುತ್ತಾರೆ.