ಭಾರತ ಸರ್ಕಾರದ ಪೃಥ್ವಿ ವಿಜ್ಞಾನ ಸಚಿವಾಲಯದ (Ministry of Earth Sciences) ಕೇಂದ್ರ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಒಡಿಶಾದ ಸಂಬಲ್ಪುರದಲ್ಲಿ ಭಾರತದ 51ನೇ ಅತ್ಯಾಧುನಿಕ ಡಾಪ್ಲರ್ ಹವಾಮಾನ ರಾಡಾರ್ (Doppler Weather Radar - DWR) ಅನ್ನು ವರ್ಚುವಲ್ (ಆನ್‌ಲೈನ್) ಮೂಲಕ ಉದ್ಘಾಟಿಸಿದ್ದಾರೆ.
- ಸ್ಥಳ: ಒಡಿಶಾದ ಸಂಬಲ್ಪುರದ ಕೈನ್ಸಿರ್ (Jamadarpali).   
- ನೆಟ್‌ವರ್ಕ್ ಬೆ ಬೆಳವಣಿಗೆ: 2014ರಲ್ಲಿ ದೇಶದಲ್ಲಿ ಕೇವಲ 14 ಡಾಪ್ಲರ್ ರಾಡಾರ್‌ಗಳಿದ್ದವು. ಪ್ರಸ್ತುತ ಈ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.
- ಒಡಿಶಾದಲ್ಲಿ ಜಾಲ: ಗೋಪಾಲ್ಪುರ ಮತ್ತು ಪಾರಾದೀಪ್ ನಂತರ ಸಂಬಲ್ಪುರದ್ದು ಒಡಿಶಾದ 3ನೇ ಡಾಪ್ಲರ್ ರಾಡಾರ್.   
- ಕಾರ್ಯವ್ಯಾಪ್ತಿ: ಇದು C-ಬ್ಯಾಂಡ್ ರಾಡಾರ್ ಆಗಿದ್ದು, 250 ಕಿ.ಮೀ ರೇಡಿಯಸ್ ವ್ಯಾಪ್ತಿಯಲ್ಲಿ ನಿಖರ ಮಳೆಯ ದತ್ತಾಂಶ ಹಾಗೂ 450 ಕಿ.ಮೀ ವರೆಗೆ ಹವಾಮಾನ ಚಲನೆಯನ್ನು ಪತ್ತೆ ಮಾಡುತ್ತದೆ.
- ಮಿಷನ್ ಮೌಸಮ್ (Mission Mausam): ಈ ಯೋಜನೆ ಅಡಿಯಲ್ಲಿ ದೇಶಾದ್ಯಂತ ರಾಡಾರ್‌ಗಳ ಸಂಖ್ಯೆಯನ್ನು 81ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.   
ಡಾಪ್ಲರ್ ರಾಡಾರ್ ಹೇಗೆ ಕೆಲಸ ಮಾಡುತ್ತದೆ?
- ಡಾಪ್ಲರ್ ಪರಿಣಾಮ (Doppler Effect): ಈ ರಾಡಾರ್ ಭೌತವಿಜ್ಞಾನದ ಡಾಪ್ಲರ್ ಪರಿಣಾಮದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. (ತರಂಗದ ಆಕರ ಮತ್ತು ವೀಕ್ಷಕ ನಡುವಿನ ಚಲನೆಯಿಂದ ಆವರ್ತನದಲ್ಲಿ ಉಂಟಾಗುವ ಬದಲಾವಣೆ).
- ರೇಡಿಯೋ ತರಂಗಗಳ ಬಳಕೆ: ಆಂಟೆನಾದಿಂದ ವಾತಾವರಣಕ್ಕೆ ರೇಡಿಯೋ ತರಂಗಗಳನ್ನು ರವಾನಿಸಲಾಗುತ್ತದೆ. ಇವು ಮಳೆಹನಿ ಅಥವಾ ಮೋಡಗಳಿಗೆ ತಗುಲಿ ವಾಪಸ್ ಬಂದಾಗ, ಅವುಗಳ ಸಮಯ ಮತ್ತು ಆವರ್ತನ ಅಳೆದು ಮಳೆಯ ಪ್ರಮಾಣ ಹಾಗೂ ಚಲನೆಯನ್ನು ಪತ್ತೆ ಮಾಡಲಾಗುತ್ತದೆ.   
ವಿವಿಧ ಬ್ಯಾಂಡ್‌ಗಳ ರಾಡಾರ್‌ಗಳು: ಭಾರತೀಯ ಹವಾಮಾನ ಇಲಾಖೆ (IMD) ಮುಖ್ಯವಾಗಿ ಮೂರು ರೀತಿಯ ಆವರ್ತನ ಬ್ಯಾಂಡ್‌ಗಳನ್ನು ಬಳಸುತ್ತದೆ:

ಬ್ಯಾಂಡ್ ಪ್ರಕಾರ ತರಂಗಾಂತರ / ಆವರ್ತನ ಪ್ರಮುಖ ಉಪಯೋಗ / ವ್ಯಾಪ್ತಿ
S-Band 2-4 GHz (ಹೆಚ್ಚು ತರಂಗಾಂತರ) ದೂರದ ವ್ಯಾಪ್ತಿ (400+ km), ಚಂಡಮಾರುತ ಹಾಗೂ ಹೆವಿ ಮಳೆ ಪತ್ತೆಹಚ್ಚಲು.
C-Band 4-8 GHz (ಮಧ್ಯಮ ವ್ಯಾಪ್ತಿ) ಮಧ್ಯಮ ವ್ಯಾಪ್ತಿಯ ಮಳೆ ಹಾಗೂ ಸೈಕ್ಲೋನ್‌ ನಿಗಾ (ಸಂಬಲ್ಪುರದಲ್ಲಿ ಬಳಸಲಾಗಿದೆ).
X-Band 8-12 GHz (ಕಡಿಮೆ ತರಂಗಾಂತರ) ಕಡಿಮೆ ವ್ಯಾಪ್ತಿ (~100 km), ಗುಡುಗು, ಸಿಡಿಲು, ಮೇಘಸ್ಫೋಟ (Cloudburst) ನಿಖರ ಪತ್ತೆಗೆ.