* ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ದೇಶೀಯ ಲೇಸರ್ ಶಸ್ತ್ರಾಸ್ತ್ರ ವ್ಯವಸ್ಥೆಯಾದ ದುರ್ಗಾ -2 ಪರೀಕ್ಷಿಸಲು ಸಜ್ಜಾಗಿದೆ.
* ಅಮೇರಿಕ, ಚೀನಾ, ಟರ್ಕಿ, ಇರಾನ್ ಮತ್ತು ಪಾಕಿಸ್ತಾನ ಸೇರಿದಂತೆ ಪ್ರಮುಖ ಮಿಲಿಟರಿ ಶಕ್ತಿಗಳು ಲೇಸರ್ ಶಸ್ತ್ರಾಸ್ತ್ರ ಗಳ ಅಭಿವೃದ್ಧಿಯ ವ್ಯವಸ್ಥೆಯಲ್ಲಿ ನಿರಂತರವಾಗಿ ತೊಡಗಿವೆ .
* DRDO ಕಳೆದ 2 ದಶಕಗಳಿಂದ ಕಾರ್ಯನಿರ್ವಹಿಸಿ ದುರ್ಗಾ -2 ಅಭಿವೃದ್ಧಿಪಡಿಸಿದೆ. ಈ ವರ್ಷ(2024)ದ ಜೂನ್ ತಿಂಗಳ ಒಳಗೆ DRDO ಪರೀಕ್ಷೆ ನಡೆಯುವ ನಿರೀಕ್ಷೆಯಿದೆ.
* ಈ ಪರೀಕ್ಷೆಯು ಯಶ್ವಸಿಯಾದರೆ ಶತ್ರು ರಾಷ್ಟ್ರಗಳ ಕ್ಷಿಪಣಿಯನ್ನು ಅಥವಾ ವಾಯುದಾಳಿಯನ್ನು ತಡೆದು ಉಡಾಯಿಸುವ ಬ್ಯಾಲಿಸ್ಟಿಕ್ ಅಥವಾ ಕ್ರೂಸ್ ಕ್ಷಿಪಣಿಗಳ ವಿರುದ್ಧ ದುರ್ಗಾ ಲೇಸರ್ ಶಸ್ತ್ರಾಸ್ತ ವ್ಯವಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಲಿದೆ.
ಶನಿವಾರ, 24 ಫೆಬ್ರುವರಿ 2024
4:50 ಅಪರಾಹ್ನ
Daily PDF
DRDO ಅಭಿವೃದ್ಧಿಪಡಿಸಿದ ದುರ್ಗಾ -2 ಶೀಘ್ರದಲ್ಲೇ ಪರೀಕ್ಷಿಸಲು ಸಜ್ಜಾಗಿದೆ
Authored by:
Yallamma G