➤ ಕೇಂದ್ರ ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು (ACC) ಇವರ ನೇಮಕಾತಿಗೆ ಅಧಿಕೃತ ಅನುಮೋದನೆ ನೀಡಿದ್ದು, ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
➤ ಡಾ. ಶ್ರೀನಿವಾಸ ಕುಮಾರ್ ತುಮ್ಮಲ: ಮೂರು ದಶಕಗಳಿಗೂ ಹೆಚ್ಚು ಕಾಲ ರಿಮೋಟ್ ಸೆನ್ಸಿಂಗ್ ಮತ್ತು ಸಾಗರ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಡಾ. ಶ್ರೀನಿವಾಸ ಕುಮಾರ್ ತುಮ್ಮಲ ಅವರು, ಹೈದರಾಬಾದ್‌ನ ‘ಇನ್ಕೊಯಿಸ್’ (INCOIS) ನಿರ್ದೇಶಕರಾಗಿ ಹಾಗೂ ಆಸ್ಟ್ರೇಲಿಯಾದಲ್ಲಿ ಯುನೆಸ್ಕೋದ (UNESCO-IOC) ಹಿಂದೂ ಮಹಾಸಾಗರ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಯ ಮುಖ್ಯಸ್ಥರಾಗಿ ಜಾಗತಿಕ ಮಟ್ಟದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
➤ ಭಾರತದ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಯ ಶಿಲ್ಪಿ: 2004ರ ಭೀಕರ ಸುನಾಮಿ ದುರಂತದ ನಂತರ, ಭಾರತದಲ್ಲಿ ಅತ್ಯಾಧುನಿಕ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು (Indian Tsunami Early Warning System) ಸ್ಥಾಪಿಸುವಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
➤ ಪ್ರಮುಖ ಪ್ರಶಸ್ತಿ ಮತ್ತು ಗೌರವಗಳು:
- ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ (National Geoscience Award - 2010): ಭಾರತದಲ್ಲಿ ವಿಶ್ವದರ್ಜೆಯ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಯಶಸ್ವಿಯಾಗಿ ಸ್ಥಾಪಿಸಿದ್ದಕ್ಕಾಗಿ ಕೇಂದ್ರ ಗಣಿ ಸಚಿವಾಲಯ ಈ ಪ್ರಶಸ್ತಿ ನೀಡಿ ಗೌರವಿಸಿದೆ.
- ಇಂಡಿಯನ್ ನ್ಯಾಷನಲ್ ಜಿಯೋಸ್ಪೇಷಿಯಲ್ ಪ್ರಶಸ್ತಿ (Indian National Geospatial Award - 2008): ವಿಪತ್ತು ನಿರ್ವಹಣೆ ಮತ್ತು ಜಿಯೋಸ್ಪೇಷಿಯಲ್ ತಂತ್ರಜ್ಞಾನದ ಬಳಕೆಗೆ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ಲಭಿಸಿದೆ.