* ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿದ ಫೈಮ್ ಸಿಟಿ ಇಂಡೆಕ್ಸ್ ವರದಿಯ ಪ್ರಕಾರ ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಹೈದರಾಬಾದ್ ಪಡೆದುಕೊಂಡಿದೆ.
* ಆಡಳಿತ, ಸಾಮಾಜಿಕ- ಆರ್ಥಿಕ ಚಿತ್ರಣ, ಮೂಲಸೌಕರ್ಯ ಅಭಿವೃದ್ಧಿ ಮತ್ತು ರಿಯಲ್ ಎಸ್ಟೇಟ್ ಬೆಳವಣಿಗೆ ಆಧರಿಸಿ ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಈ ರ‍್ಯಾಂಕಿಂಗ್ ವರದಿಯನ್ನು ನೀಡಿದೆ.
* ಫೈಮ್ ಸಿಟಿ ಇಂಡೆಕ್ಸ್ ವರದಿಯನ್ನು ಮಂಗಳವಾರ (ನವೆಂಬರ್ 19) ಬಿಡುಗಡೆ ಮಾಡಿದ್ದು, ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಮೂರನೇ ಸ್ಥಾನವನ್ನು ಮುಂಬೈ, ನಾಲ್ಕನೇ ಸ್ಥಾನವನ್ನು ದೆಹಲಿ ಪಡೆದುಕೊಂಡಿವೆ.
ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರಿಗೆ 2ನೇ ಸ್ಥಾನ
Published by Yallamma G
20 ನವೆಂಬರ್ 2024