* ದೇಶದ ಪ್ರತಿ ಜಿಲ್ಲೆಯಲ್ಲಿಯೂ ಸರಕಾರದಿಂದ ಅಂಗೀಕೃತವಾಗ ಒಂದು ನವೋದ್ಯಮ (ಸ್ಟಾರ್ಟಪ್) ಸ್ಥಾಪನೆಗೆ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ನಿರ್ಧರಿಸಿದೆ.
* ದೇಶದ 125 ಜಿಲ್ಲೆಗಳಲ್ಲಿ ಒಂದು ನವೋದ್ಯಮವಿಲ್ಲ, ಆ ಜಿಲ್ಲೆಗಳಲ್ಲಿ ಸ್ಟಾರ್ಟ್ ಅಪ್ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಶೀಘ್ರವೇ ಈ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು' ಎಂದು ಡಿಪಿಐಐಟಿ ಜಂಟಿ ಕಾರ್ಯದರ್ಶಿ ಸಂಜೀವ್ ಅವರು ತಿಳಿಸಿದರು.
* ಸ್ಟಾರ್ಟ್ ಅಪ್‌ಗಳು ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಿವೆ. ಜಿಲ್ಲೆಗಳಲ್ಲಿ ಸ್ಥಾಪನೆಯಾದರೆ ಅಲ್ಲಿರುವ ಹೊಸ ಉದ್ದಿಮೆದಾರರಿಗೂ ಪ್ರೇರಣೆ ಸಿಗಲಿದೆ ಎಂದರು.
* ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಐಎಸಿ ಅಡಿಯಲ್ಲಿ 3 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗಳು ತೆರಿಗೆ ವಿನಾಯಿತಿ ಸೌಲಭ್ಯ ಪಡೆಯುತ್ತಿವೆ. ಸರ್ಕಾರದ ಸಾಲ ವಿತರಣಾ ಯೋಜನೆಯಡಿಯೂ ಅವುಗಳಿಗೆ ಆರ್ಥಿಕ ನೆರವು ಲಭಿಸುತ್ತಿದೆ ಎಂದು ತಿಳಿಸಿದರು.
* ಮಹಾರಾಷ್ಟ್ರದಲ್ಲಿ ಅತಿಹೆಚ್ಚು ತೆರಿಗೆ ವಿನಾಯಿತಿ ಸೌಲಭ್ಯ ಪಡೆಯುತ್ತಿರುವ ಸ್ಟಾರ್ಟ್ ಅಪ್‌ಗಳಿವೆ. ಆ ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ ಎಂದರು.
* 2016 ರಲ್ಲಿ ಪ್ರಧಾನಿ ನರೇದ್ರ ಮೋದಿ ಅವರು ಸ್ಟಾರ್ಟ್ ಅಪ್ ಇಂಡಿಯಾ ಕ್ಕೆ ಚಾಲನೆ ನೀಡಿದರು. ದೇಶದಲ್ಲಿ 2016 ರಲ್ಲಿ 400 ಸ್ಟಾರ್ಟ್ ಅಪ್ ಗಳು 2023 ಡಿಸೆಂಬರ್ ಅಂತ್ಯಕ್ಕೆ ೧.17 ಲಕ್ಷ ಸ್ಟಾರ್ಟ್ ಅಪ್ ಸತಿದೆ ಎಂದು ಮಾಹಿತಿ ನೀಡಿದ್ದಾರೆ.
* DPIIT ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ 112 ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳು ಸುಮಾರು $350 ಶತಕೋಟಿ ಮೌಲ್ಯವನ್ನು ಹೊಂದಿವೆ. ಯುನಿಕಾರ್ನ್ $1 ಶತಕೋಟಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಕಂಪನಿಯನ್ನು ಸೂಚಿಸುತ್ತದೆ.
* ಜನವರಿ 16 ರಂದು ಸ್ಟಾರ್ಟ್‌ಅಪ್‌ಗಳ ರಾಜ್ಯ ಶ್ರೇಯಾಂಕ ಪ್ರಶಸ್ತಿ 2022 ರ ಪ್ರಕಾರ ಗುಜರಾತ್, ಕರ್ನಾಟಕ, ಕೇರಳ ಮತ್ತು ತಮಿಳುನಾಡು "ಅತ್ಯುತ್ತಮ ಪ್ರದರ್ಶನ" ರಾಜ್ಯಗಳಾಗಿವೆ. ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ ಮತ್ತು ತೆಲಂಗಾಣವು "ಉನ್ನತ ಪ್ರದರ್ಶನ" ಎಂದು ಸ್ಥಾನ ಪಡೆದಿವೆ.
ದೇಶದ ಪ್ರತಿ ಜಿಲ್ಲೆಯಲ್ಲೂ ಸರ್ಕಾರದಿಂದ ಅಂಗೀಕೃತವಾದ ನವೋದ್ಯಮ (ಸ್ಟಾರ್ಟಪ್) ಸ್ಥಾಪನೆ
Published by Bhagya R K
18 ಜನವರಿ 2024