* ಪದುಚೇರಿಯು ಇಂಡೋ-ನಾರ್ವೆ ಇಂಟಿಗ್ರೇಡ್ ಓಷನ್ ಇನಿಶಿಯೇಟಿವ್ ಅಡಿಯ ಒಪ್ಪಂದದ ಭಾಗವಾಗಿ ದೇಶದ ಮೊದಲ ಸಾಗರ ಪ್ರಾದೇಶಿಕ ಯೋಜನೆ (MSP) ಚೌಕಟ್ಟನ್ನು ಆರಂಭಿಸಿದೆ.
* ಈಗ ಮತ್ತು ಭವಿಷ್ಯದ ಪೀಳಿಗೆಗೆ ಸಾಗರ ಮತ್ತು ಕರಾವಳಿಯನ್ನು ಯಾವರೀತಿಯಲ್ಲಿ ಸಮರ್ಥವಾಗಿ ಬಳಸಲಾಗುತ್ತದೆ ಹಾಗೂ ರಕ್ಷಿಸಲಾಗುತ್ತದೆ ಎಂಬುವುದನ್ನು ಉತ್ತಮವಾಗಿ ನಿರ್ಧರಿಸಲು ಸಮಾಜಕ್ಕೆ ಸಾರ್ವಜನಿಕ ನೀತಿ ಪ್ರಕ್ರಿಯೆಯನ್ನು ಒದಗಿಡುತ್ತದೆ .
* ಭಾರತ ಮತ್ತು ನಾರ್ವೆ ನಡುವಿನ 2019 ರ ತಿಳುವಳಿಕೆ ಒಪ್ಪಂದದ ನಂತರ MSP ಉಪಕ್ರಮವನ್ನು ಪೈಲಟ್ ಮಾಡಲು ಪುದುಚೇರಿ ಮತ್ತು ಲಕ್ಷದ್ವೀಪಗಳನ್ನು ಕರಾವಳಿ ಪ್ರದೇಶಗಳಾಗಿ ಆಯ್ಕೆ ಮಾಡಲಾಗಿದೆ.
* ಪ್ರಸ್ತುತ ಮತ್ತು ನಿರೀಕ್ಷಿತ ಸಾಗರ ಮತ್ತು ಕರಾವಳಿ ಬಳಕೆಗಳನ್ನು ವಿಶ್ಲೇಷಿಸಲು ಮತ್ತು ವಿವಿಧ ಚಟುವಟಿಕೆಗಳಿಗೆ ಹೆಚ್ಚು ಸೂಕ್ತವಾದ ಪ್ರದೇಶಗಳನ್ನು ಗುರುತಿಸಲು ಪರಿಸರ ವ್ಯವಸ್ಥೆ ಆಧಾರಿತ ಪ್ರಾದೇಶಿಕ ಯೋಜನೆ ಪ್ರಕ್ರಿಯೆಯಾಗಿದೆ.
* ಭೂ ವಿಜ್ಞಾನ ಸಚಿವಾಲಯವು ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರ, ಸುಸ್ಥಿರ ಕರಾವಳಿ ನಿರ್ವಹಣೆಯ ರಾಷ್ಟ್ರೀಯ ಕೇಂದ್ರ, ಪುದುಚೇರಿ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಮತ್ತು ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಇಲಾಖೆ, ಪುದುಚೇರಿ ನಾರ್ವೇಜಿಯನ್ ಪರಿಸರ ಏಜೆನ್ಸಿಯ ಸಹಯೋಗದೊಂದಿಗೆ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.
ದೇಶದ ಮೊದಲ ಸಾಗರ ಪ್ರಾದೇಶಿಕ ಯೋಜನೆ (MSP) ಚೌಕಟ್ಟು
Published by Yallamma G
22 ಫೆಬ್ರವರಿ 2023