* ಪ್ರತಿ ವರ್ಷ ಡಿಸೆಂಬರ್ 20ರಂದು ವಿವಿಧತೆಯಲ್ಲಿ ಏಕತೆ ಗೌರವಿಸಲು ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನವನ್ನು ಆಚರಿಸಲಾಗುತ್ತದೆ.
* ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ ಡಿಸೆಂಬರ್ 20 ಅನ್ನು ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನವೆಂದು ಘೋಷಿಸಿತು. ಡಿಸೆಂಬರ್ 22, 2005 ರಂದು ಈ ನಿರ್ಣಯವನ್ನು ಅಂಗೀಕರಿಸಿತು, ವಿಶ್ವ ಸಾಲಿಡಾರಿಟಿ ಫಂಡ್ ಅನ್ನು ಜನರಲ್ ಅಸೆಂಬ್ಲಿಯು ಡಿಸೆಂಬರ್ 20, 2002 ರಂದು ಸ್ಥಾಪಿಸಲಾಯಿತು.
* ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನದ 2023 ರ ಥೀಮ್ : "ಬಡತನ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಟ" ಎಂಬುದು ಘೋಷವಾಕ್ಯವಾಗಿದೆ.
* 2005 ರಲ್ಲಿ ಆರಂಭವಾದ ಈ ದಿನಾಚರಣೆಯು ಮಾನವರ ಒಗ್ಗಟ್ಟು ಎಂಬ ಶಕ್ತಿಯ ಮೂಲಕ ಭೂ ಸುಧಾರಣೆ, ಆರೋಗ್ಯ ಸೌಲಭ್ಯಗಳು, ಪ್ರಕೃತಿ ವಿಕೋಪಗಳಲ್ಲಿ ನಲುಗಿದವರಿಗೆ ಸಹಾಯ ಹಸ್ತ ಚಾಚುವುದು, ಸಾರ್ವತ್ರಿಕ ಶಿಕ್ಷಣವನ್ನು ಪ್ರೋತ್ಸಾಹಿಸುವುದು, ಬಡತ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡುವ ಉದ್ದೇಶಗಳನ್ನು ಹೊಂದಿವೆ.
ಬುಧವಾರ, 20 ಡಿಸೆಂಬರ್ 2023
10:45 ಪೂರ್ವಾಹ್ನ
Daily PDF
ಡಿಸೆಂಬರ್ 20 ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನ
Authored by:
Bhagya R K