* ಎಐಸಿಸಿ ರಾಷ್ಟ್ರೀಯ ಸಂಯೋಜಕಿ ಭವ್ಯ ನರಸಿಂಹ ಮೂರ್ತಿ ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ಅವರು ಲೆಫ್ಟಿನೆಂಟ್ ಹುದ್ದೆಗೆ ಭದ್ರಪಡೆಯಾಗಿ ಕಾಶ್ಮೀರ ಗಡಿಯಲ್ಲಿ ತರಬೇತಿ ಪಡೆದಿದ್ದಾರೆ.
* ಭವ್ಯ ಅವರು ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಎಂಬ ಗೌರವವನ್ನು ಪಡೆದುಕೊಂಡಿದ್ದಾರೆ.
* 2022ರ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಏಕೈಕ ಮಹಿಳಾ ಅಭ್ಯರ್ಥಿಯೂ ಕೂಡ ಅವರು.
* ತಮ್ಮ ಪ್ರತಿಕ್ರಿಯೆಯಲ್ಲಿ ಭವ್ಯ, “ರಾಜಕೀಯವಾಗಿ ಜನರ ಸೇವೆ ಮಾಡುವುದರ ಜೊತೆಗೆ, ಸೇನಾಧಿಕಾರಿಯಾಗಿ ದೇಶದ ಕರೆಯಾದಾಗ ಗಡಿಯಲ್ಲಿ ಸೇವೆ ಮಾಡಲು ಸಿದ್ಧಳಿದ್ದೇನೆ,” ಎಂದು ಹೇಳಿದ್ದಾರೆ.
* ಪ್ರಾದೇಶಿಕ ಸೇನೆಯಲ್ಲಿರುವ ಇತರೆ ಪ್ರಮುಖ ವ್ಯಕ್ತಿಗಳಲ್ಲಿ ಎಂ.ಎಸ್. ಧೋನಿ, ಸಚಿನ್ ಪೈಲಟ್ ಹಾಗೂ ಅನುರಾಗ ಠಾಕುರ್ ಅವರಂತವರು ಕೂಡ ಸೇರಿದ್ದಾರೆ.
ಡೆಹ್ರಾಡೂನ್ ಸೇನಾ ತರಬೇತಿ ಸಂಸ್ಥೆಗೆ ಭವ್ಯ ನರಸಿಂಹ ಮೂರ್ತಿ ಮೊದಲ ಮಹಿಳೆ
Published by Jyoti Angadi
05 ಜುಲೈ 2025