* ಸಂಸದೀಯ ಪಯಣ ಮುಗಿಸಿದ ಆರ್ಥಿಕ ಸುಧಾರಣೆಗಳ ಹರಿಕಾರ ಮನಮೋಹನ್ ಸಿಂಗ್ ಅವರು ಸುದೀರ್ಘ 33 ವರ್ಷಗಳ ಸಂಸದೀಯ ಜೀವನದಿಂದ ನಿವೃತ್ತಿ ಹೊಂದಿದ್ದಾರೆ.
* 91 ವರ್ಷದ ಸಿಂಗ್ ಅವರ ರಾಜ್ಯಸಭಾ ಸದಸ್ಯತ್ವ ಏಪ್ರಿಲ್ 3 ರಂದು ಕೊನೆಗಂಡಿದೆ. 1990ರಲ್ಲಿ ಆರ್ಥಿಕ ಸುಧಾರಣೆಗಳು, ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ತೋರಿದ ಮನಮೋಹನ್ ಸಿಂಗ್ ಅವರದು.
* ಸೆಪ್ಟೆಂಬರ್ 26, 1932 ರಂದು ಬ್ರಿಟಿಷ್ ಭಾರತದ ಗಾಹ್‌ನಲ್ಲಿ (ಈಗ ಪಾಕಿಸ್ತಾನದಲ್ಲಿದೆ) ಜನಿಸಿದ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು, ನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಡಿ ಫಿಲ್ ಪಡೆದರು.
* ಸಿಂಗ್ ಅವರು 1971 ರಲ್ಲಿ ಆರ್ಥಿಕ ಸಲಹೆಗಾರರಾಗಿದ್ದರು, ಮುಖ್ಯ ಆರ್ಥಿಕ ಸಲಹೆಗಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್, ಹಣಕಾಸು ಕಾರ್ಯದರ್ಶಿ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (UGC) ಅಧ್ಯಕ್ಷರು, ಹಣಕಾಸು ಮಂತ್ರಿ ಸೇರಿದಂತೆ ವಿವಿಧ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ
ಗುರುವಾರ, 04 ಎಪ್ರಿಲ್ 2024
5:05 ಅಪರಾಹ್ನ
Daily PDF
ಡಾ.ಮನಮೋಹನ್ ಸಿಂಗ್ ಅವರು ಸಂಸದೀಯ ಜೀವನದಿಂದ ನಿವೃತ್ತಿ
Authored by:
Yallamma G