ಧೂಮಕೇತು NEOWISE ಪ್ರತ್ಯಕ್ಷ : ಮತ್ತೆ 6,800 ವರ್ಷಗಳ ನಂತರ ಕಾಣಸಿಗಲಿದೆ
Published by Basavaraj Halli
17 ಜುಲೈ 2020
ನವದೆಹಲಿ : ಬ್ರಹ್ಮಾಂಡದಿಂದ ನಮ್ಮ ಸೌರಮಂಡಲಕ್ಕೆ ಅತಿಥಿಯಾಗಿ ಆಗಮಿಸಿರುವ C/2020 F3 ಧೂಮಕೇತು ಜುಲೈ 14 ರಿಂದ 20 ದಿನಗಳವರೆಗೆ ಸೌರಮಂಡಲದಲ್ಲಿ ಇರುತ್ತದೆ.
ನಾಸಾ ಪ್ರಕಾರ, ಉತ್ತರ ಗೋಳಾರ್ಧದಲ್ಲಿ ವೀಕ್ಷಕರಿಗೆ ಸೂರ್ಯಾಸ್ತದ ನಂತರ ಧೂಮಕೇತು NEOWISE ಅನ್ನು ಕಾಣಸಿಗಲಿದೆ. ಆದರೆ ದಕ್ಷಿಣ ಗೋಳಾರ್ಧದದಲ್ಲಿ ಇದು ಗೋಚರಿಸುವುದಿಲ್ಲ.
ಮತ್ತೆ ಈ ಧೂಮಕೇತವು ಸರಿಸುಮಾರು 6800 ವರ್ಷಗಳ ಬಳಿಕ ನಮ್ಮ ಸೌರಮಂಡಲ ಪ್ರವೇಶಿಸಲಿದೆ ಎಂದು NASA ತಿಳಿಸಿದೆ