ಚೀನಾದ ವುಹಾನ್​ನಿಂದ ಆರಂಭವಾದ ಕೋವಿಡ್​-19 ಸೋಂಕು ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳಿಗೂ ಹಬ್ಬಿದ್ದು, ಅಪಾರ ಸಾವು ನೋವು ಸೇರಿದಂತೆ ದೇಶಗಳ ಆರ್ಥಿಕ ಸಂಕಷ್ಟಕ್ಕೀಡು ಮಾಡಿದೆ. ಈ ನಡುವೆ ನ್ಯೂಜಿಲೆಂಡ್​ ರಾಷ್ಟ್ರ ಮಾತ್ರ ತಾನು ಕೋವಿಡ್​-19 ಮುಕ್ತವಾಗಿರುವುದಾಗಿಯೂ, ಸೋಂಕು ನಿಯಂತ್ರಣಕ್ಕೆ ತಾನು ಜಾರಿಗೊಳಿಸಿದ್ದ ಎಲ್ಲ ನಿರ್ಬಂಧಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ. * ನ್ಯೂಜಿಲೆಂಡ್​ ಪ್ರಧಾನಿ ಜೆಸಿಂಡಾ ಆರ್ಡೆನ್​, ದೇಶದಲ್ಲಿ ಕೋವಿಡ್​ ನಿರ್ಬಂಧಗಳೆಲ್ಲವನ್ನೂ ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ. ಹಾಗೂ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಿ ಸಹಕರಿಸಿದ್ದಕ್ಕಾಗಿ ದೇಶದ ಪ್ರಜೆಗಳೆಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.