ಭಾರತೀಯ ರೈಲ್ವೆಯಿಂದ ಮೊದಲ ಬಾರಿ ಗಡಿಯಾಚೆಗೂ ಪಾರ್ಸೆಲ್ ರೈಲು ಸೇವೆ ಆರಂಭ
Published by Basavaraj Halli
13 ಜುಲೈ 2020
ಇದೇ ಮೊದಲ ಬಾರಿಗೆ ದೇಶದ ಗಡಿಯಾಚೆಗೂ ಭಾರತೀಯ ರೈಲ್ವೆ ತನ್ನ ಪಾರ್ಸೆಲ್ ಸೇವೆಯನ್ನು ವಿಸ್ತರಿಸಿದೆ.
ಮೊದಲ ಪಾರ್ಸೆಲ್ ರೈಲು ಬಾಂಗ್ಲಾದೇಶದ ಬೇನಾಪೋಲ್ ಗೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಡ್ಡಿಪಲೆಂನಿಂದ ಒಣಮೆಣಸಿನಕಾಯಿ ಹೊತ್ತೊಯ್ದಿತು. ಈ ವಿಶೇಷ ಪಾರ್ಸೆಲ್ ರೈಲಿಗೆ 16 ವ್ಯಾನ್ ಗಳಿದ್ದು, ಒಟ್ಟು 384 ಟನ್ ತೂಕದ ಒಣಮೆಣಸಿನಕಾಯಿ ಸಾಗಿಸಲಾಯಿತು. ಹಾಗೂ ಈ ಮೂಲಕ ಶೇಕಡಾ 30 ಪರ್ಸೆಂಟ್ ಗೂ ಹೆಚ್ಚು ಹಣ ಉಳಿತಾಯ ಮಾಡಲಾಯಿತು.