ಜುಲೈ 11 : ವಿಶ್ವ ಜನಸಂಖ್ಯಾ ದಿನ
Published by Surekha Halli
11 ಜುಲೈ 2020
ವಿಶ್ವ ಜನಸಂಖ್ಯಾ ದಿನವನ್ನು ಪ್ರತಿವರ್ಷ ಜುಲೈ 11 ರಂದು ಆಚರಿಸಲಾಗುತ್ತದೆ, ಈ ಆಚರಣೆ ಮೂಲಕ ಜಾಗತಿಕ ಜನಸಂಖ್ಯೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಮೇಲೆ ಬೆಳಕು ಚಲ್ಲಲು ಹಾಗು ಈ ಕುರಿತು ಜಾಗೃತಿ ಮೂಡಿಸಲಾಗುವದು.
* ಈ ಘಟನೆಯನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಆಡಳಿತ ಮಂಡಳಿ 1989 ರಲ್ಲಿ ಆರಂಭಿಸಲಾಯಿತು.
* ಜುಲೈ 11, 1987 ರಂದು ವಿಶ್ವದ ಅಂದಾಜು ಜನಸಂಖ್ಯೆ ಐದು ಶತಕೋಟಿ ತಲುಪಿದ ದಿನಾಂಕವಾಗಿದೆ.
* ಕುಟುಂಬ ಯೋಜನೆಯ ಮಹತ್ವ, ಲಿಂಗ ಸಮಾನತೆ, ಬಡತನ, ತಾಯಿಯ ಆರೋಗ್ಯ ಮತ್ತು ಮಾನವ ಹಕ್ಕುಗಳಂತಹ ವಿವಿಧ ಜನಸಂಖ್ಯಾ ವಿಷಯಗಳ ಬಗ್ಗೆ ಜನರ ಜಾಗೃತಿಯನ್ನು ಹೆಚ್ಚಿಸುವ ಉದ್ದೇಶವನ್ನು ವಿಶ್ವ ಜನಸಂಖ್ಯಾ ದಿನ ಹೊಂದಿದೆ.