ಮಂಗಳ ಗ್ರಹದ ಮೇಲೆ ನೀರಿನ ಕುರುಹು: ESA ಮಾಹಿತಿ
Published by Basavaraj Halli
08 ಜುಲೈ 2020
ಮಂಗಳ ಗ್ರಹದ ಮೇಲೆ ನೀರಿನ ಕುರುಹು ಪತ್ತೆಯಾಗಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.
ಮಂಗಳ ಗ್ರಹದ ಮೇಲೆ ಬೃಹತ್ ಮಂಜುಗಡ್ಡೆಯ ಕುಳಿ ಪತ್ತೆಯಾಗಿದ್ದು, ಇದು ಅಂದಾಜು 82 ಕಿ.ಮೀ. ಅಗಲವಾಗಿದ್ದು, ಈ ಕುಳಿಯಲ್ಲಿ 1.8 ಕಿ.ಮೀ. ಆಳವಾದ ಮಂಜುಗಡ್ಡೆ ಇದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.
* ಪತ್ತೆಯಾದ ಈ ಕುಳಿಯನ್ನು ಕೊರೊಲೇವ್ ಕುಳಿ ಎಂದು ಗುರುತಿಸಲಾದ್ದು, ಈ ಕುಳಿಯ ದೃಶ್ಯಗಳನ್ನು ತನ್ನ ಮಾರ್ಸ್ ಎಕ್ಸ್ಪ್ರೆಸ್ ರವಾನಿಸಿರುವುದಾಗಿ ಇಎಸ್ಎ ತಿಳಿಸಿದೆ.
* ಮಂಗಳಗ್ರಹದ ಅಧ್ಯಯನಕ್ಕಾಗಿ ಈಗಾಗಲೇ ಅಮೆರಿಕ, ಯುರೋಪ್ ಒಕ್ಕೂಟ ಮತ್ತು ಭಾರತ ಸೇರಿ ಅನೇಕ ದೇಶಗಳು ಪ್ರಯತ್ನ ಮುಂದುವರೆಸಿರುವ ಈ ಸಮಯದಲ್ಲಿ ಇಎಸ್ಎ ಸಿಹಿಸುದ್ದಿ ನೀಡಿದೆ.