ರಾಜ್ಯ ಸರ್ಕಾರದಿಂದ ವರ್ಚುವಲ್ ಉದ್ಯೋಗ ಮೇಳ ಆಯೋಜನೆ : ದೇಶದಲ್ಲೇ ಮೊದಲ ಪ್ರಯೋಗ
Published by Basavaraj Halli
08 ಜುಲೈ 2020
ಬೆಂಗಳೂರು: ಕರೊನಾ ಲಾಕ್ಡೌನ್ನಿಂದಾಗಿ ಅನೇಕರು ಉದ್ಯೋಗ ಕಳೆದುಕೊಂಡಿದ್ದು, ಇಂತವರಿಗೆ ಉದ್ಯೋಗ ಕಲ್ಪಿಸಿಕೊಡಲು ಮತ್ತು ಅನೇಕ ಉದ್ಯೋಗದಾತರು ಅರ್ಹ ಅಭ್ಯರ್ಥಿಗಳ ಶೋಧದಲ್ಲಿದ್ದಾರೆ. ಈ ಸಮಸ್ಯೆಗೆ ಏಕಕಾಲಕ್ಕೆ ಪರಿಹಾರ ರೂಪದಲ್ಲಿ ಅಂತರ್ಜಾಲ ತಾಣದ ವೇದಿಕೆ ಮೂಲಕ ಪರಿಹಾರ ನೀಡಲು ರಾಜ್ಯ ಸರ್ಕಾರವು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವರ್ಚುವಲ್ ಉದ್ಯೋಗ ಮೇಳವನ್ನು ಇದೆ ಜುಲೈ 10 ರಂದು ಆಯೋಜಿಸಿದೆ. ಈ ನೂತನ ಪ್ರಯೋಗವು ಭಾರತದಲ್ಲೇ ಮೊದಲ ಪ್ರಯತ್ನವಾಗಿದೆ.