ಸ್ವದೇಶಿ ನಿರ್ಮಿತ 11,300 ವೆಂಟಿಲೇಟರ್ ಗಳ ರವಾನೆ : ಡಾ. ಹರ್ಷವರ್ಧನ್
Published by Basavaraj Halli
07 ಜುಲೈ 2020
ನವದೆಹಲಿ: ದೇಶದಲ್ಲಿ ಈವರೆಗೂ ಒಟ್ಟು 11,300 ಸ್ವದೇಶಿ ನಿರ್ಮಿತ ವೆಂಟಿಲೇಟರ್ ಗಳನ್ನು ದೇಶಾದ್ಯಂತ ರವಾನೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ್ ಇತ್ತೀಚಿಗೆ ಮಾಹಿತಿ ನೀಡಿದರು.
* ದೇಶದಲ್ಲಿ ಈ ವರೆಗೂ 11,300 ಸ್ವದೇಶಿ ನಿರ್ಮಿತ ವೆಂಟಿಲೇಟರ್ ಗಳನ್ನು ರವಾನೆ ಮಾಡಲಾಗಿದೆ. ಇವುಗಳ ಪೈಕಿ 6,154 ವೆಂಟಿಲೇಟರ್ ಗಳು ಈಗಾಗಲೇ ಆಸ್ಪತ್ರೆಗಳಿಗೆ ರವಾನೆಯಾಗಿವೆ.
* ದೇಶಾದ್ಯಂತ 1.02 ಲಕ್ಷ ಆಕ್ಸಿಜನ್ ಸಿಲಿಂಡರ್ ಗಳನ್ನು ಸಪ್ಲೈ ಮಾಡಲಾಗಿದ್ದು, ಈ ಪೈಕಿ 72,293 ಸಿಲಿಂಡರ್ ಗಳನ್ನು ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಗಿದೆ.
* ಕೊರೋನಾ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆಗಳ ಉತ್ಪಾದನೆ ಪ್ರಮಾಣ ಹೆಚ್ಚಿಸಲಾಗಿದ್ದು, ದೇಶಾದ್ಯಂತ 6.12 ಕೋಟಿ ಮಾತ್ರೆಗಳನ್ನು ರವಾನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.