ರಾಜಸ್ಥಾನದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಕ್ರೀಡಾಂಗಣ ನಿರ್ಮಾಣ
Published by Surekha Halli
07 ಜುಲೈ 2020
ಜೈಪುರ : ವಿಶ್ವದ ಮೂರನೇ ಅತಿ ದೊಡ್ಡ ಹಾಗೂ ಭಾರತದ ಎರಡನೇ ಅತಿದೊಡ್ಡ ಕ್ರೀಡಾಂಗಣ ರಾಜಸ್ಥಾನ ರಾಜ್ಯದ ಜೈಪುರದಲ್ಲಿದೆ.
ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ (ಆರ್ಸಿಎ) ನಿರ್ಮಿಸಿರುವ ಈ ಕ್ರೀಡಾಂಗಣವು ಜೈಪುರದಲ್ಲಿದ್ದು, ಒಟ್ಟು 75 ಸಾವಿರ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ.
ಇದು ಗುಜರಾತ್ನ ಮೊಟೆರಾ ಕ್ರಿಕೆಟ್ ಕ್ರೀಡಾಂಗಣ ಮತ್ತು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದ ನಂತರದ ಸ್ಥಾನ ಅಂದರೆ ವಿಶ್ವದ ಮೂರನೇ ಅತಿ ದೊಡ್ಡ ಕ್ರೀಡಾಂಗಣ ಇದಾಗಿದೆ.
ಈ ಕ್ರೀಡಾಂಗಣವನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದ್ದು, ಮೊದಲನೇ ಹಂತದಲ್ಲಿ 45 ಸಾವಿರ ವೀಕ್ಷಕರ ಸಾಮರ್ಥ್ಯ, ಹಾಗೂ ಎರಡನೇ ಹಂತದಲ್ಲಿ ಅದರ ಸಾಮರ್ಥ್ಯವನ್ನು 75 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿದು ಬಂದಿದೆ.