ರಾಜ್ಯದಲ್ಲಿ ನೆರೆ ನಿರ್ವಹಣೆಗಾಗಿ "ಗ್ರಾಮವಾರು ಕ್ರಿಯಾ ಯೋಜನೆ" ಸಿದ್ಧಪಡಿಸಲಾಗುತ್ತಿದೆ
Published by Siddaram Halli
06 ಜುಲೈ 2020
ಕಳೆದ ವರ್ಷದ ಕರ್ನಾಟಕದಲ್ಲಿ ಪ್ರವಾಹದಿಂದ ಸಾವಿರಾರು ಹಳ್ಳಿಗಳಲ್ಲಿ ತೀವ್ರ ನಷ್ಟ ಅನುಭವಿಸಿದ ಹಿನ್ನಲೆ, ಈಗ "ದೇಶದಲ್ಲಿಯೇ ಮೊದಲ" ಬಾರಿಗೆ "ಗ್ರಾಮವಾರು ಕ್ರಿಯಾ ಯೋಜನೆ"ಯನ್ನು ಸಿದ್ಧಪಡಿಸಲಾಗುತ್ತಿದೆ. ಈ ನೂತನ ಕಾರ್ಯಕ್ರಮದಡಿಯಲ್ಲಿ ಸ್ಥಳೀಯರನ್ನು ಒಳಗೊಂಡಂತೆ ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣೆ ಯೋಜನೆಯನ್ನು ಸಿದ್ದಪಡಿಸಲಾಗುತ್ತಿದ್ದು,
* ಪ್ರವಾಹ ಉಂಟಾದರೆ ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲವನ್ನು ಬಳಸಿ ಹೇಗೆ ತಡೆಗಟ್ಟಬೇಕು?
* ಎಲ್ಲೆಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಬೇಕು?
* ಕೊಚ್ಚಿ ಹೋಗುವ ಪ್ರದೇಶಗಳಲ್ಲಿ ಸಾಧ್ಯವಾದರೆ ಶಾಶ್ವತ , ತುರ್ತು ತಡೆಗೋಡೆಗಳ ನಿರ್ಮಾಣ
ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಗ್ರಾಮವಾರು ಮಾಡಲಾಗುತ್ತದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ "ಮನೋಜ್ ರಾಜನ್" ಮಾಹಿತಿ ನೀಡಿದ್ದಾರೆ.