ನಾಗಾಲ್ಯಾಂಡ್ ಸರ್ಕಾರದಿಂದ ನಾಯಿ ಮಾಂಸ ಮಾರಾಟ ನಿಷೇಧಕ್ಕೆ ನಿರ್ಧಾರ
Published by Basavaraj Halli
05 ಜುಲೈ 2020
ನಾಗಾಲ್ಯಾಂಡ್ ಸರ್ಕಾರ ನಾಯಿ ಮಾಂಸದ ಮಾರಾಟವನ್ನು ನಿಷೇಧ ಮಾಡಲು ನಿರ್ಧರಿಸಿದ್ದು, ಜೊತೆಗೆ ನಾಯಿ ಮಾಂಸದ ವಾಣಿಜ್ಯ ಆಮದು, ನಾಯಿ ವ್ಯಾಪಾರ ಹಾಗೂ ಮಾರುಕಟ್ಟೆಯನ್ನು ಸಹ ನಿಷೇಧಿಸಲು ತೀರ್ಮಾನ ಕೈಗೊಂಡಿದೆ. ಈ ಕುರಿತು ನಾಗಾಲ್ಯಾಂಡ್ ಸರ್ಕಾರದ ಮುಖ್ಯ ಕಾರ್ಯದರ್ಶಿ ತೆಮ್ಜೆನ್ ಟಾಯ್ ಮಾಹಿತಿ ನೀಡಿದ್ದಾರೆ.
ಫೆಡರೇಷನ್ ಆಫ್ ಇಂಡಿಯನ್ ಪ್ರೊಟೆಕ್ಷನ್ ಆರ್ಗನೈಸೇಷನ್ ಸಲ್ಲಿಸಿಸ ಮನವಿಯನುಸಾರ ನಾಗಾಲ್ಯಾಂಡ್ ಸರ್ಕಾರ ನಾಯಿ ಮಾಂಸ ಮಾರಾಟ ನಿಷೇಧ ಕ್ರಮ ಕೈಗೊಂಡಿದೆ.