ವೈದ್ಯರ ದಿನ : ಪಶ್ಚಿಮ ಬಂಗಾಳದಲ್ಲಿ ರಾಜ್ಯದ ರಜೆ ದಿನವನ್ನಾಗಿ ಘೋಷಣೆ
Published by Basavaraj Halli
02 ಜುಲೈ 2020
ಪಶ್ಚಿಮ ಬಂಗಾಳ : ವೈದ್ಯರ ದಿನವನ್ನು ರಾಜ್ಯದ ರಜೆ ದಿನವನ್ನಾಗಿ ಘೋಷಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆದೇಶಿಸಿದ್ದಾರೆ. ಪ್ರತಿ ವರ್ಷ ಜುಲೈ ತಿಂಗಳ ಒಂದನೇ ತಾರೀಕಿನಂದು ಆಚರಿಸಲಾಗುತ್ತಿದ್ದು, ರಾಜ್ಯದಲ್ಲಿ ಕೋವಿಡ್ ವಿರುದ್ಧ ಎಲ್ಲಾ ವೈದ್ಯರು, ವೈದ್ಯಕೀಯ ವೃತ್ತಿಪರರು, ಅರೆವೈದ್ಯಕೀಯ ಸಿಬ್ಬಂದಿಗಳು ಹೋರಾಡುತ್ತಿದ್ದು, ತಮ್ಮ ಸುರಕ್ಷತೆ ಮತ್ತು ಆರೋಗ್ಯಕ್ಕಿಂತ ಹೆಚ್ಚಾಗಿ ಜನರ ಆರೋಗ್ಯ-ಪ್ರಾಣ ರಕ್ಷಣೆ ಮಾಡುವಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ವೈದ್ಯರ ದಿನವನ್ನು ರಾಜ್ಯ ರಜೆ ದಿನವನ್ನಾಗಿಸುವುದು ಈ ಎಲ್ಲ ಯೋಧರಿಗೆ ಗೌರವ ತೋರಿಸದಂತಾಗುತ್ತದೆ ಎಂದು ಮಮತಾ ಬ್ಯಾನರ್ಜಿಯವರು ತಿಳಿಸಿದ್ದಾರೆ.