ಸ್ವಿಜರ್‌ಲ್ಯಾಂಡ್‌ : ಅಮೆರಿಕದ ಸ್ವಿಜರ್‌ಲ್ಯಾಂಡ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವ ಹವಾಮಾನ ಇಲಾಖೆಯು ಇದೀಗ ದಾಖಲೆ ಮಾಡಿರುವ ಮಿಂಚಿನ ಕುರಿತಾಗಿ ವಿವರಣೆ ನೀಡಿದೆ. ಇಲ್ಲಿಯವರೆಗಿನ ಬಲು ಉದ್ದದ ಮಿಂಚು ಎಂದು ಎನಿಸಿಕೊಂಡಿರುವುದು 2018ರ ಅಕ್ಟೋಬರ್‌ 31ರಂದು ಕಾಣಿಸಿಕೊಂಡಿದೆ. ಬ್ರೆಜಿಲ್‌ನ ಆಗಸದಲ್ಲಿ ಈ ಮಿಂಚು ಕಾಣಿಸಿಕೊಂಡಿದ್ದು, ಇದು 709 ಕಿ.ಮೀ. ಉದ್ದವಿರುವುದಾಗಿ ವಿಶ್ವ ಹವಾಮಾನ ಇಲಾಖೆ ತಿಳಿಸಿದ್ದು, ಪ್ರಸ್ತುತ ಇದನ್ನು ದಾಖಲೆಯ ಪಟ್ಟಿಗೆ ಸೇರಿಸಲಾಗಿದೆ. * ಅದೇ ರೀತಿ ಉತ್ತರ ಅರ್ಜೆಂಟಿನಾದ ಆಗಸದಲ್ಲಿ ಮೂಡಿದ ಮಿಂಚು. 16.73 ಸೆಕೆಂಡ್‌ಗಳ ಕಾಲ ಈ ಮಿಂಚುವ ಮೂಲಕ ಇಲ್ಲಿಯವರೆಗೆ ಕಾಣಿಸಿಕೊಂಡಿರುವ ಅತಿ ಹೆಚ್ಚು ಕಾಲ ಮಿಂಚಿದ ಮಿಂಚು ಎನ್ನುವ ದಾಖಲೆಗೆ ಪಾತ್ರವಾಗಿದೆ.