150 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡ ಭಾರತದ ಮೊದಲ ಕಂಪನಿ : ರಿಲಯನ್ಸ್ ಇಂಡಸ್ಟ್ರೀಸ್
Published by Basavaraj Halli
23 ಜೂನ್ 2020
ಭಾರತದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ದಿನಾಂಕ 22 ಜೂನ್ 2020 ರಂದು 150 ಬಿಲಿಯನ್ ಡಾಲರ್ ತಲುಪುವುದರೊಂದಿಗೆ ಭಾರತದ ಮೊದಲ ಕಂಪನಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೋಮವಾರ(22 ಜೂನ್) ಬೆಳಗ್ಗೆ ಷೇರು ವಹಿವಾಟಿನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ 28,248.97 ಕೋಟಿಯಿಂದ 11,43,667 ಕೋಟಿ ರೂಪಾಯಿಗೆ (150 ಬಿಲಿಯನ್ ಡಾಲರ್) ತಲುಪುವ ಮೂಲಕ ಈ ಸಾಧನೆ ಮಡಿದ ಮೊದಲ ಭಾರತದ ಕಂಪನಿಯಾಗಿ ರಿಲಯನ್ಸ್ ಹೆಗ್ಗಳಿಕೆಗೆ ಪಾತ್ರವಾಯಿತು.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರಾದ ಮುಕೇಶ್ ಅಂಬಾನಿಯವರು ತಮ್ಮ ತೈಲ ಉದ್ಯಮದಿಂದ ದೂರಸಂಪರ್ಕ ಉದ್ಯಮದ ನಿವ್ವಳ ಸಾಲ ಮುಕ್ತವಾಗಿದೆ ಎಂದು ಘೋಷಿಸಿದ ನಂತರ ಕಂಪನಿಯ ಮಾರುಕಟ್ಟೆ ಮೌಲ್ಯ 11 ಲಕ್ಷ ಕೋಟಿ ರೂ. ದಾಟಿದೆ.
* ಈ ಮೂಲಕ ವಿಶ್ವದ 10 ಅಗ್ರಗಣ್ಯ ಶ್ರೀಮಂತರ ಪಟ್ಟಿಗೆ ಮುಕೇಶ ಸೇರ್ಪಡೆಗೊಂಡಿದ್ದು, ಅವರಿಗ 9 ನೇ ಸ್ಥಾನದಲ್ಲಿರುವದಾಗಿ ಬ್ಲೂಮ್ಗ್ ಬಿಲೇನಿಯರ್ ಸೂಚ್ಯಂಕ ವರದಿ ಮಾಡಿದೆ.