2 ನೇ ಮಹಾಯುದ್ಧದ 75 ನೇ ವಿಜಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲಿರುವ ರಾಜನಾಥ್ ಸಿಂಗ್
Published by Basavaraj Halli
21 ಜೂನ್ 2020
ನವದೆಹಲಿ : ರಷ್ಯಾದ ಮಾಸ್ಕೊ ನಗರದಲ್ಲಿ ಎರಡನೇ ಮಹಾಯುದ್ಧದಲ್ಲಿ ವಿಜಯೋತ್ಸವದ 75ನೇ ವರ್ಷಾಚರಣೆಯ ನೆನಪಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಸ್ಕೊ ದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಭಾರತದಿಂದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ. ಇದೆ ಜೂನ್ 24, 2020 ರಂದು ಮಾಸ್ಕೊ ನಗರದಲ್ಲಿ ವಿಕ್ಟರಿ ಪೆರೇಡ್ ನಡೆಯಲಿದೆ.