ಆಶಾ ಕಾರ್ಯಕರ್ತೆಯರಿಗೆ ರಾಜ್ಯಸರ್ಕಾರದಿಂದ ಪ್ರೋತ್ಸಾಹಧನ : ಸಚಿವ ಎಸ್.ಟಿ.ಸೋಮಶೇಖರ
Published by Siddaram Halli
20 ಜೂನ್ 2020
ಬಳ್ಳಾರಿ : ರಾಜ್ಯದಲ್ಲಿ ಕೋರೋಣ ವೈರಸ್ ವಿರುದ್ಧ ಹೋರಾಟದಲ್ಲಿ ಶ್ರಮವಹಿಸಿದ ಎಲ್ಲ 42 ಸಾವಿರ ಜನ ಆಶಾಕಾರ್ಯಕರ್ತೆಯರಿಗೆ ತಲಾ 3 ಸಾವಿರಗಳಂತೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ ವಿತರಣೆ ಮಾಡಲಾಗುತ್ತಿದೆ.
* ಕೋವಿಡ್-19ರ ಸಂಕಷ್ಟದ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಬಿಸಿಲು-ಮಳೆ ಎನ್ನದೇ ಕರ್ತವ್ಯನಿರ್ವಹಣೆ ಮಾಡಿದ್ದು, ಕೋವಿಡ್ ನಿಯಂತ್ರಣದಲ್ಲಿ ಅವರ ಪಾಲು ಬಲುದೊಡ್ಡದು. ಇವರ ಸೇವೆಯನ್ನು ಪರಿಗಣಿಸಿದ ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹಧನ ಘೋಷಿಸಿದ್ದಾರೆ.