ನವದೆಹಲಿ : ಭಾರತದಾದ್ಯಂತ ದೇಶಾದ್ಯಂತ ಕೊರೋನಾ ವೈರಸ್ ನಿಂದ ವಿಧಿಸಿದ ಲಾಕ್ ಡೌನ್ ಪರಿಣಾಮ ದೇಶದ ಬಹುತೇಕ ಉದ್ಯಮ ಚಟುವಟಿಕೆ ಸ್ಥಗಿತವಾಗಿದ್ದರ ಪರಿಣಾಮ ದೇಶದ GST ಆದಾಯ ಶೇ. 56 ರಷ್ಟು ಕುಸಿತಗೊಂಡಿದೆ. ಕೇಂದ್ರ ಸರ್ಕಾರದ ಮೂಲಗಳ ಮಾಹಿತಿಯ ಪ್ರಕಾರ, ಕೊರೋನಾ ಲಾಕ್ ಡೌನ್ ನಿಂದಾಗಿ ಏಪ್ರಿಲ್ ತಿಂಗಳಲ್ಲಿ ಶೇ. 56 ರಷ್ಟು ಮತ್ತು ಮೇ ತಿಂಗಳಿನಲ್ಲಿ ಶೇ 42 ರಷ್ಟು ಜಿಎಸ್ ಟಿ ಆದಾಯ ಕುಸಿದಿದೆ ಎನ್ನಲಾಗಿದೆ.