ಏಷ್ಯನ್ ಚಾಂಪಿಯನ್‌ಶಿಪ್ ವಿಜೇತೆ ಗೋಮತಿ ಮಾರಿಮುತು ಪದಕದಿಂದ ಹೊರಕ್ಕೆ
Published by Basavaraj Halli
15 ಜೂನ್ 2020
ಏಷ್ಯನ್ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದ ಗೋಮತಿ ಮಾರಿಮುತು ಅವರನ್ನು ಪದಕದಿಂದ ತೆಗೆದುಹಾಕಲಾಗಿದ್ದು, ಅಲ್ಲದೆ ಕ್ರೀಡಾ ಚಟುವಟಿಕೆಗಳಿಂದ 4 ವರ್ಷಗಳ ಕಾಲ ನಿಷೇಧ ಹೇರಲಾಗಿದೆ.
* ಗೋಮತಿ ಮಾರಿಮುತು ತಮಿಳುನಾಡು ಮೂಲದ ಭಾರತೀಯ ಫೀಲ್ಡ್ ರನ್ನರ್ ಆಗಿದ್ದು. ಕತಾರ್‌ನ ದೋಹಾದಲ್ಲಿ ನಡೆದ 2019 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ವಿಭಾಗದ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಅವರು ಚಿನ್ನದ ಪದಕವನ್ನು ಪಡೆದಿದ್ದರು, ಹಾಗೂ ಡೋಪಿಂಗ್ ಆರೋಪದಡಿಯಲ್ಲಿ ರಕ್ತದ ಮಾದರಿ ಪರೀಕ್ಷೆಯಲ್ಲಿ ಧನಾತ್ಮಕ ವರದಿ ಬಂದ ಹಿನ್ನಲೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.