ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್‌ (NIRF) ದೇಶದ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. * NIRF ವಾರ್ಷಿಕ ಶ್ರೇಯಾಂಕ ಪಟ್ಟಿಯ ಪ್ರಕಾರ, ಐಐಎಸ್‌ಸಿ ಬೆಂಗಳೂರು, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ಮೊದಲ ಮೂರು ಅತ್ಯುನ್ನತ ವಿಶ್ವವಿದ್ಯಾಲಯಗಳ ಸಾಲಿನಲ್ಲಿವೆ. * ಐಐಎಂ ಅಹಮದಾಬಾದ್ ದೇಶದ ಅತ್ಯುನ್ನತ ಬಿ-ಸ್ಕೂಲ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಐಐಎಂ ಬೆಂಗಳೂರು ಎರಡನೇ ಮತ್ತು ಐಐಎಂ ಕೋಲ್ಕತ್ತ ಮೂರನೇ ಸ್ಥಾನ ಲಭಿಸಿದೆ. * ಅಗ್ರ ಶ್ರೇಯಾಂಕದ ಕಾಲೇಜುಗಳ ಪಟ್ಟಿಯಲ್ಲಿ ದೆಹಲಿಯ ಮಿರಾಂಡಾ ಕಾಲೇಜು ಮೊದಲ ಸ್ಥಾನ ಪಡೆದಿದ್ದು, ದೆಹಲಿಯ ಲೇಡಿ ಶ್ರೀರಾಮ್ ಮಹಿಳಾ ಕಾಲೇಜು ಎರಡನೇ ಮತ್ತು ಸೇಂಟ್ ಸ್ಟೀಫನ್ಸ್ ಕಾಲೇಜು ಮೂರನೇ ಸ್ಥಾನ ಪಡೆದಿವೆ. * ಎಂಜಿನಿಯರಿಂಗ್ ವಿಭಾಗದಲ್ಲಿ ಐಐಟಿ ಮದ್ರಾಸ್ ಮೊದಲ, ಐಐಟಿ ದೆಹಲಿ ಎರಡನೇ ಮತ್ತು ಐಐಟಿ ಮುಂಬೈ ಮೂರನೇ ಸ್ಥಾನ ಗಳಿಸಿವೆ. * ಫಾರ್ಮಸಿ ವಿಭಾಗದಲ್ಲಿ ದೆಹಲಿಯ ಜಾಮಿಯಾ ಹಮ್‌ದರ್ದ್ ಇನ್‌ಸ್ಟಿಟ್ಯೂಟ್ ಮೊದಲ ಸ್ಥಾನ, ಚಂಡೀಗಡದ ಪಂಜಾಬ್ ವಿಶ್ವವಿದ್ಯಾಲಯ ಎರಡನೇ ಮತ್ತು ಮೊಹಾಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸಂಶೋಧನಾ ಕೇಂದ್ರ ಮೂರನೇ ಸ್ಥಾನ ಪಡೆದಿವೆ. * ವೈದ್ಯಕೀಯ ಕಾಲೇಜುಗಳ ವಿಭಾಗದಲ್ಲಿ ದೆಹಲಿಯ ಏಮ್ಸ್‌ ಮೊದಲ ಸ್ಥಾನ ಪಡೆದಿದ್ದು, ಚಂಡೀಗಡದ ಪಿಜಿಐ ಎರಡನೇ ಮತ್ತು ವೆಲ್ಲೂರಿನ ಸಿಎಂಸಿ ಮೂರನೇ ಸ್ಥಾನ ಪಡೆದಿವೆ.