ರಾಜ್ಯ ಸರ್ಕಾರದಿಂದ ನೇಕಾರ ಸಮ್ಮಾನ್ ಯೋಜನೆ ಜಾರಿ
Published by Basavaraj Halli
11 ಜೂನ್ 2020
ಬೆಂಗಳೂರು : ಕೋವಿಡ್-19 ಲಾಕ್‌ಡೌನ್ ಸಮಯ್ದಲ್ಲಿ ರಾಜ್ಯ ಸರ್ಕಾರದಿಂದ ಘೋಷಣೆಯಾಗಿರುವ ನೇಕಾರ ಸಮ್ಮಾನ್ ಯೋಜನೆಯನ್ನು ಜಾರಿ ಮಾಡಲಾಗಿದೆ.
ನೇಕಾರ ಸಮ್ಮಾನ್ ಯೋಜನೆ :
ಲಾಕ್ ಡೌನ್ ನಿಂದಾಗಿ ಕೈಮಗ್ಗ ನೇಕಾರರು ಸಂಕಷ್ಟದಲ್ಲಿರುವುದನ್ನು ಮನಗಂಡು ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾಗಿರುವ ನೇಕಾರ ಸಮ್ಮಾನ್ ಯೋಜನೆ ಉಪಯೋಗ ಪಡೆಯಲು ಅರ್ಹ ಕೈಮಗ್ಗ ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
* ರಾಜ್ಯ ಸರ್ಕಾರ 2020-21 ನೇ ಸಾಲಿನಿಂದ ಕೈಮಗ್ಗ ನೇಕಾರಿಕೆ ಹಾಗೂ ಇತರೆ ಕೈಮಗ್ಗ ಚಟುಚಟಿಕೆ ನಡೆಸುವ ನೇಕಾರರಿಗೆ ತಲಾ 2 ಸಾವಿರ ರೂ ನೆರವು ನೀಡಲು ನೇಕಾರ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ.