ವಿಶ್ವಸಂಸ್ಥೆ: ವಿಶ್ವ ಸಂಸ್ಥೆಯ ಮಹತ್ವದ 75ನೇ ಸಾಮಾನ್ಯ ಸಭೆಯು ಇದೇ ಸೆಪ್ಟೆಂಬರ್ 15ರಿಂದ ಆರಂಭಗೊಳ್ಳಬೇಕಿತ್ತು. ಆದರೆ ಜಾಗತಿಕವಾಗಿ ಕೋವಿಡ್ ಸೋಂಕು ಆವರಿಸಿರುವ ಹಿನ್ನಲೆ ಮುಂದಿನ ಕೆಲವು ತಿಂಗಳು ವಿಶ್ವಸಂಸ್ಥೆಯಲ್ಲಿ ಯಾವುದೇ ಮುಖ್ಯ ಸಭೆಗಳು ನಡೆಯುವುದು ಅನುಮಾನವಾಗಿದೆ. 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಯಾವ ನಾಯಕರೂ ನ್ಯೂಯಾರ್ಕ್‌ಗೆ ಬರುತ್ತಿಲ್ಲ ಎಂದು ಸಾಮಾನ್ಯಸಭೆಯ ಅಧ್ಯಕ್ಷ ಟಿಜ್ಜನಿ ಮುಹಮ್ಮದ್ ಬಂದೆ ಅವರು ತಿಳಿಸಿದ್ದಾರೆ.