ಗೀತರಚನೆಕಾರ ಜಾವೇದ್ ಅಖ್ತರ್ಗೆ ಪ್ರತಿಷ್ಠಿತ 'ರಿಚರ್ಡ್ ಡಾಕಿನ್ಸ್' ಪ್ರಶಸ್ತಿ
Published by Basavaraj Halli
08 ಜೂನ್ 2020
ಮುಂಬೈ : ರಾಷ್ಟ್ರೀಯ ಪ್ರಶಸ್ತಿ ವಿಜೇತ ಗೀತರಚನೆಕಾರ ಮತ್ತು ಚಲನಚಿತ್ರಗಳ ಸಾಹಿತ್ಯ ರಚನೆಕಾರ ಜಾವೇದ್ ಅಖ್ತರ್ ಅವರನ್ನು ಪ್ರತಿಷ್ಠಿತ ರಿಚರ್ಡ್ ಡಾಕಿನ್ಸ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಭಾರತದ ಚಿತ್ರರಂಗದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಜಾವೇದ್ ಅಖ್ತರ್ ಅವರು ಹಲವು ಸಾಮಾಜಿಕ ವಿಷಯಗಳ ಬಗ್ಗೆ ಧ್ವನಿಯೆತ್ತಿತ್ತಿರುತ್ತಾರೆ. ಪೌರತ್ವ ತಿದ್ದುಪಡಿ ಕಾಯ್ದೆ, ಇಸ್ಲಾಮೊಫೋಬಿಯಾ ಸೇರಿ ಮುಂತಾದ ವಿಷಯಗಳ ಬಗ್ಗೆ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.