ಜಿಯೋ ಸಂಸ್ಥೆಯಲ್ಲಿ ADIAನಿಂದ 5,683 ಕೋಟಿ ರೂ ಹೂಡಿಕೆ
Published by Basavaraj Halli
08 ಜೂನ್ 2020
ಮುಂಬೈ : ಅಬು ಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ (ADIA) ಸಂಸ್ಥೆಯು ರಿಲಯನ್ಸ್ ಸಂಸ್ಥೆಯ ಅಂಗ ಸಂಸ್ಥೆಯಾದ ಜಿಯೋದಲ್ಲಿ ಶೇ. 1.16 ರಷ್ಟು ಪಾಲುನ್ನು ಖರೀದಿಸಲು ನಿರ್ಧರಿಸಿರುವದಾಗಿ ತಿಳಿದುಬಂದಿದ್ದು, ಈ ಮೂಲಕ ಸಂಸ್ಥೆಯು ಒಟ್ಟು 5,683 ಕೋಟಿ ರೂ ಬಂಡವಾಳ ಹೂಡಿಕೆ ಮಾಡುವುದು.
* ರಿಲಾಯನ್ಸ್ ಜಿಯೋದಲ್ಲಿ ಹೂಡಿಕೆ ಅಥವಾ ಪಾಲು ಖರೀದಿ ಮಾಡುತ್ತಿರುವ 7ನೇ ಸಂಸ್ಥೆ ADIA ಯಾಗಿದೆ.
* ಈಗಾಗಲೇ ಫೇಸ್ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ ಮತ್ತು ಈಗ ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ ಸಂಸ್ಥೆ ಈವರೆಗೆ ಜಿಯೋದಲ್ಲಿ ಹೂಡಿಕೆ ಮಾಡಿವೆ.
* ಈ 7 ಸಂಸ್ಥೆಗಳ ಹೂಡಿಕೆ ಒಪ್ಪಂದಗಳಿಂದಾಗಿ ರಿಲಾಯನ್ಸ್ ಜಿಯೋಗೆ ಸಂಸ್ಥೆಗೆ ಒಟ್ಟು ರೂಪಾಯಿ 97,885.65 ಕೋಟಿ ಬಂಡವಾಳ ಹರಿದುಬರಲಿದೆ.
* ಇಲ್ಲಿಯವರೆಗೆ ಜಿಯೋ ಸಂಸ್ಥೆಯು ತನ್ನ ಒಟ್ಟು ಶೇ. 21.06ರಷ್ಟು ಪಾಲನ್ನು ಮಾರಿದಂತಾಗಿದೆ.