ನವದೆಹಲಿ: ಅನುಭವಿ ರಾಯಭಾರಿ ಹಾಗೂ ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ರವೀಶ್‌ ಕುಮಾರ್‌ ಅವರನ್ನು ಫಿನ್‌ಲ್ಯಾಂಡ್‌ನಲ್ಲಿ ಭಾರತದ ಮುಂದಿನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ. * ಸದ್ಯ ವಾಣಿ ರಾವ್‌ ಅವರು ಫಿನ್‌ಲ್ಯಾಂಡ್‌ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. * ರವೀಶ್‌ ಕುಮಾರ್‌ ಅವರು ವಿದೇಶಾಂಗ ಸಚಿವಾಲಯದ ವಕ್ತಾರರಾಗಿ 2017ನೇ ಜುಲೈನಿಂದ 2020ನೇ ಏಪ್ರಿಲ್‌ ವರೆಗೂ ಕಾರ್ಯನಿರ್ವಹಿಸಿದ್ದಾರೆ. ಬಾಲಾಕೋಟ್‌ ದಾಳಿ, ಜಮ್ಮು ಕಾಶ್ಮೀರ ಕುರಿತ ವಿಚಾರ ಹಾಗೂ ಎನ್‌ಆರ್‌ಸಿ ಅಂಥ ಸೂಕ್ಷ್ಮ ವಿಚಾರಗಳಲ್ಲಿ ವಿಶ್ವದ ಎದುರು ಭಾರತದ ನಿಲುವನ್ನು ಮಂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.