ರಾಜ್ಯದ ತಳವಾರ, ಪರಿವಾರ, ಸಿದ್ಧಿ ಜನಾಂಗ ಎಸ್ಟಿಗೆ: ಅಧಿಸೂಚನೆ ಪ್ರಕಟ
Published by Basavaraj Halli
01 ಜೂನ್ 2020
ಬೆಂಗಳೂರು: ತಳವಾರ, ಪರಿವಾರ, ಸಿದ್ಧಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸುವ ಹೊಸ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಈ ಮೂಲಕ ಈ ಪಂಗಡಗಳನ್ನು ಎಸ್ಟಿಗೆ ಸೇರಿಸಬೇಕೆನ್ನುವ ಬಹು ವರ್ಷಗಳ ಬೇಡಿಕೆ ಪೂರ್ಣಗೊಂಡಂತಾಗಿದೆ.
ಈ ಕುರಿತು ಕರ್ನಾಟಕ ಸರ್ಕಾರದ ಗೆಜೆಟ್ ಅಧಿಸೂಚನೆ ಪ್ರಕಟಗೊಂಡಿದ್ದು, ಪರಿಶಿಷ್ಟ ಪಂಗಡಗಳ ಸಂವಿಧಾನ ತಿದ್ದುಪಡಿ ಕಾಯ್ದೆ 2020ರ ರ ಅನ್ವಯ ನೂತನ ಪಟ್ಟಿಯಲ್ಲಿ ತಳವಾರ ಮತ್ತು ಪರಿವಾರ ಹಾಗೂ ಸಿದ್ಧಿ ಜನಾಂಗವನ್ನು ಪರಿಶಿಷ್ಟ ಪಂಗಡದ ಪಟ್ಟಿ ಸೇರಿಸಲಾಗಿದೆ.