ಛತ್ತೀಸ್ ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಇನ್ನಿಲ್ಲ
Published by Basavaraj Halli
30 ಮೇ 2020
ರಾಯಪುರ್ : ಅನಾರೋಗ್ಯದಿಂದ ಬಳಲುತ್ತಿದ್ದ ಛತ್ತೀಸ್ ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ರಾಯಪುರದ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ 74 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಒಬ್ಬ ಅಧಿಕಾರಿಯಾಗಿದ್ದ ಅಜಿತ್ ಜೋಗಿ ಅವರು ಬಳಿಕ ರಾಜಕಾರಣಿಯಾಗಿ ಛತ್ತೀಸ್ ಗಢ ಅಸ್ತಿತ್ವಕ್ಕೆ ಬಂದ ಬಳಿಕ ನವೆಂಬರ್ 2000 ರಿಂದ 2003 ರ ನವೆಂಬರ್ ವರೆಗೆ ಒಟ್ಟು 3 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ಇವರು ತಮ್ಮ ಸೇವೆ ಸಲ್ಲಿಸಿದ್ದರು.