ಸ್ವಚ್ಛತೆಯಲ್ಲಿ 5 ಸ್ಟಾರ್ ಪಡೆದ ಮೈಸೂರು ನಗರ
Published by Basavaraj Halli
19 ಮೇ 2020
ನವದೆಹಲಿ : ಸಾಂಸ್ಕೃತಿಕ ನಗರ ಎಂದೇ ಖ್ಯಾತಿ ಪಡೆದಿರುವ ರಾಜ್ಯದ ಮೈಸೂರು ನಗರವು ಸ್ವಚ್ಛತೆಯ ವಿಷಯದಲ್ಲಿ ಮತ್ತೊಮ್ಮೆ ಹೆಗ್ಗಳಿಕೆ ಪಡೆದಿದೆ. ಕೇಂದ್ರ ಸರ್ಕಾರ ಘೋಷಿಸಿದ ಕಸಮುಕ್ತ ನಗರಗಳ ಪೈಕಿ ಮೈಸೂರು ನಗರಕ್ಕೆ ಫೈವ್ ಸ್ಟಾರ್ ರ್ಯಾಂಕ್ (ಪಂಚತಾರಾ ಶ್ರೇಣಿ) ದೊರೆತಿದೆ. ಈಗಾಗಲೇ ದೇಶದ ಸ್ವಚ್ಚರೈಲು ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿರುವ ಮೈಸೂರು ಈಗ ಕಸಮುಕ್ತ ನಗರ ಎಂಬ ಮಾನ್ಯತೆಗೂ ಪಾತ್ರವಾಗಿದೆ.
ಕೇಂದ್ರ ಸರ್ಕಾರ ವಸತಿ ಮತ್ತು ನಗರಾಭಿವೃದ್ದಿ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿರುವಂತೆ ಅಂಬಿಕಾಪುರ್ (ಛತ್ತೀಸ್‍ಗಢ), ರಾಜಕೋಟ್(ಗುಜರಾತ್), ಸೂರತ್ (ಗುಜರಾತ್), ಮೈಸೂರು (ಕರ್ನಾಟಕ), ಇಂದೋರ್ (ಮಧ್ಯಪ್ರದೇಶ) ಹಾಗೂ ನವಿ ಮುಂಬೈ (ಮಹಾರಾಷ್ಟ್ರ) ನಗರಗಳನ್ನು ಪಂಚತಾರಾ ಶ್ರೇಣಿಯ ನಗರಗಳೆಂದು ಗುರುತಿಸಲಾಗಿದೆ.
ಇನ್ನುಳಿದಂತೆ ಕರ್ನಾಲ್, ನವದೆಹಲಿ, ತಿರುಪತಿ, ವಿಜಯವಾಡ, ಚಂಡಿಗಢ, ಬಿಲಾಯ್ ನಗರ್ ಮತ್ತುಅಹಮದಾಬಾದ್ ನಗರಗಳು ಮೂರು ಸ್ಟಾರ್ ಶ್ರೇಣಿ ನೀಡಲಾಗಿದೆ. ಜೊತೆಗೆ ದೆಹಲಿ ಕಂಟೋನ್ಮೆಂಟ್, ವಡೋದರ, ಮತ್ತುರೋಹಟನ್ ನಗರಗಳಿಗೆ ಒಂದು ಸ್ಟಾರ್ ಶ್ರೇಣಿಯಾ ಕಸ ಮುಕ್ತ ನಗರಿ ಎಂಬ ಶ್ರೇಣಿ ಕೊಡಲಾಗಿದೆ.