ಗಗನಯಾನ್ ಮಿಷನ್: ಸ್ಥಳೀಯ ಸ್ಟಾರ್ಟ್ ಅಪ್ಗಳ ತಂತ್ರಜ್ಞಾನಗಳನ್ನು ಗುರುತಿಸಿದ ಇಸ್ರೋ
Published by Basavaraj Halli
18 ಮೇ 2020
ಗಗನಯಾನ ಮಿಷನ್‌ನಲ್ಲಿ ಬಳಸಬಹುದಾದ ಕಡಿಮೆ ವೆಚ್ಚದ 17 ತಂತ್ರಜ್ಞಾನಗಳನ್ನು ಭಾರತೀಯ ಸ್ಟಾರ್ಟ್ ಅಪ್‌ಗಳಿಂದ ಒಅಡೆಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಗುರುತಿಸಿದೆ.
ಪ್ರಸ್ತುತ ಗುರುತಿಸಲಾದ 17 ತಂತ್ರಜ್ಞಾನಗಳಲ್ಲಿ ಗಗನಯಾತ್ರಿಗಳಿಗೆ ಆಹಾರ ಮತ್ತು ಔಷದಿ, ಜೀವ ರಕ್ಷಕ ವ್ಯವಸ್ಥೆಗಳು, ಉಷ್ಣ ಸಂರಕ್ಷಣೆ, ವಿಕಿರಣ ವಿರೋಧಿ ತಂತ್ರಜ್ಞಾನಗಳು ಸೇರಿವೆ.
ಗಗನಯಾನ ಮಿಷನ್ : ಗಗನಯಾನ ಇಸ್ರೋದ ಸಿಬ್ಬಂದಿ ಬಾಹ್ಯಾಕಾಶ ಕಾರ್ಯಕ್ರಮವಾಗಿದ್ದು. ಈ ಕಾರ್ಯಕ್ರಮದಡಿ ಮೂವರು ವಾಯುಪಡೆಯ ಪೈಲಟ್‌ಗಳು ಬಾಹ್ಯಾಕಾಶ ಪ್ರವಣ ಕೈಗೊಳ್ಳುವರು. ಇವರ ಜೊತೆ ಸ್ತ್ರೀ ರೂಪದ ರೋಬೋಟ್ ವ್ಯೋಮಿತ್ರಾ ಕೂಡ ಇರಲಿದ್ದಾರೆ. ಗಗನಯಾನ ಮಿಷನ್'ಗಾಗಿ ತರಬೇತಿ ಪಡೆಯಲು ಭಾರತ ತನ್ನ ವಾಯುಪಡೆಯ ಪೈಲಟ್‌ಗಳನ್ನು ರಷ್ಯಾಕ್ಕೆ ಕಳುಹಿಸಿತ್ತು.