ಇತ್ತೀಚೆಗೆ ಸುದ್ದಿಯಲ್ಲಿ "Event Bolt Malware" ಕುರಿತ ಮಾಹಿತಿ
Published by Basavaraj Halli
16 ಮೇ 2020
ಭಾರತದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT) “Event Bolt” ಎಂಬ ಹೊಸ ಮಾಲ್ವೇರ್ ಕುರಿತ ಎಚ್ಚರಿಕೆ ನೀಡಿದ್ದು. ಈ ಮಾಲ್‌ವೇರ್ ಆಂಡ್ರಾಯ್ಡ್ ಮೊಬೈಲ್ ಫೋನ್'ಗಳ ಬಳಕೆದಾರರಿಂದ ವೈಯಕ್ತಿಕ ಹಣಕಾಸು ಮಾಹಿತಿಯನ್ನು ಕದಿಯುತ್ತದೆ CERT ತಿಳಿಸಿದೆ.
ಈ "EventBolt" ಮಾಲ್ವೇರ್ ಟ್ರೋಜನ್ ನ್ನು ಹರಡುತ್ತದೆ, ಮತ್ತು ಕಂಪ್ಯೂಟರ್ ಅಥವಾ ಮೊಬೈಲ್ಫೋ ಫೋನಗಳ ಆಪರೇಟಿಂಗ್ ಸಿಸ್ಟಮ್ ಮೇಲೆ ರಹಸ್ಯವಾಗಿ ಆಕ್ರಮಣ ಮಾಡುವ ಮೂಲಕ ಬಳಕೆದಾರರ ಬ್ಯಾಂಕಿಂಗ್ ಸೇರಿ ಹಲವು ಮಾಹಿತಿಯನ್ನು ಕದಿಯುತ್ತದೆ.
* ಪ್ರಸ್ತುತ, ಮಾಲ್ವೇರ್ 200 ಕ್ಕೂ ಹೆಚ್ಚು ವಿವಿಧ ಹಣಕಾಸು ಅಪ್ಲಿಕೇಶನ್‌ಗಳನ್ನು ಗುರಿಯಾಗಿಸುವ ಸಾಮರ್ಥ್ಯ ಹೊಂದಿದೆ.
* ಈ ಮಾಲ್ವೇರ್ ಈಗಾಗಲೇ ಕ್ರಿಪ್ಟೋ ಕರೆನ್ಸಿ ವ್ಯಾಲೆಟ್, ಯುರೋಪ್ ಮತ್ತು ಯುಎಸ್ನಲ್ಲಿನ ಬ್ಯಾಂಕ್ ಖಾತೆಗಳನ್ನು ಲೂಟಿ ಮಾಡಿದೆ.