ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ
Published by Basavaraj Halli
09 ಮೇ 2020
ಮಡಿಕೇರಿ : ಕೊಡವ ಕುಟುಂಬಗಳ ನಡುವಿನ ಏರ್ಪಡಿಸುವ ಪ್ರಸಿದ್ಧ ಹಾಕಿ ಪಂದ್ಯಾಳಿಗಳ ಜನಕರಾಗಿರುವ ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ದಿನಾಂಕ ೦೭ ಮೇ ೨೦೨೦ ರ ಗುರುವಾರ ತಮ್ಮ ೮೬ ನೇ ವಯಸ್ಸಿನಲ್ಲಿ ಬೆಂಗಳೂರಿನ ಅವರ ಸ್ವಗೃಹದಲ್ಲಿ ನಿಧನರಾದರು.
ಕುಟ್ಟಪ್ಪ ಅವರು ಹಾಕಿಪ್ರಿಯರಾಗಿದ್ದರು, ಇದೆ ಕಾರಣದಿಂದ ಅವರು ಕೊಡಗಿನಲ್ಲಿ ಹಾಕಿ ಪಂದ್ಯಾಟಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟ ಆಯೋಜಿಸುವ ಯೋಜನೆ ರೂಪಿಸಿದ್ದರು.
* ಪ್ರತೀ ವರ್ಷ ಕೊಡಗಿನಲ್ಲಿ ಒಲಿಂಪಿಕ್ ಮಾದರಿಯಲ್ಲಿ ಒಂದು ತಿಂಗಳ ಕಾಲ ಕೌಟುಂಬಿಕ ಹಾಕಿ ಪಂದ್ಯಾವಳಿ ನಡೆಯುವುದರೊಂದಿಗೆ ವಿಶ್ವದ ಗಮನಸೆದಿದೆ. ಅಲ್ಲದೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದಿತ್ತು.