ನವದೆಹಲಿ : ಭಾರತದಲ್ಲಿ ವ್ಯಾಪಿಸಿರುವ ನೊವೆಲ್ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಭಾರತೀಯ ವೈದ್ಯರು, ಪೊಲೀಸರು ಹಾಗೂ ಕಾರ್ಮಿಕರು ಯೋಧರ ರೀತಿಯಲ್ಲಿ ಹೋರಾಡುತ್ತಿದ್ದು, ಭಾರತವನ್ನು ಕೋರೋಣ ಮುಕ್ತವಾಗಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರುಗಳಿಗೆ ವಿಶೇಷ ಗೌರವ ಸಲ್ಲಿಸುವ ಉದ್ದೇಶದಿಂದ ಭಾರತೀಯ ನೌಕಾ ಸೇನೆ ಮತ್ತು ವಾಯುಸೇನೆಗಳು ತಯಾರಿನಡೆಸಿದ್ದು, ದಿನಾಂಕ ಮೇ.03 ರಂದು ಭಾನುವಾರ ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಮೇಲೆ ಹೆಲಿಕಾಪ್ಟರ್ ಗಳನ್ನೂ ಬಳಸಿ ಪುಷ್ಪಗಳ ಮಳೆಗರೆಯಲಿವೆ.