ಕೊರೊನಾ ವಿರುದ್ಧ ಹೋರಾಟಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ ನಿಂದ 11,400 ಕೋಟಿ ಮಂಜೂರು
Published by Siddaram Halli
29 ಏಪ್ರಿಲ್ 2020
ಕೊರೊನಾ ವೈರಾಣು ವಿರುದ್ಧ ಹೋರಾಡುವ ಸಲುವಾಗಿ ಭಾರತ ಸರ್ಕಾರಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಡ್ಬ್) ಸುಮಾರು 1.5 ಬಿಲಿಯನ್ ಅಮೆರಿಕನ್ ಡಾಲರ್($) ಅಂದರೆ 11,400 ಕೋಟಿ ರೂಪಾಯಿಯಷ್ಟು ಸಾಲವನ್ನು ಮಂಜೂರು ಮಾಡಿದೆ.
ಕೋರೋಣ ಸೋಂಕು ನಿಯಂತ್ರಣ ಹಾಗೂ ತಡೆಯನ್ನು ಪ್ರಮುಖ ಉದ್ದೇಶವಾಗಿ ಗಮನದಲ್ಲಿ ಇಟ್ಟುಕೊಂಡು ಈ ಸಾಲವನ್ನು ಭಾರತಕ್ಕೆ ಮಂಜೂರು ಮಾಡಲಾಗಿದೆ.