ವಾಶಿಂಗ್ಟನ್ : ಕೊರೋನ ವೈರಸ್ ಸೋಂಕು ಬಿಸಿಲಿನಲ್ಲಿ ಬೇಗನೆ ನಾಶಹೊಂದುತ್ತದೆ ಎಂದು ಅಮೆರಿಕಾದ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಈ ವರದಿಯನ್ನು ಅಮೆರಿಕದ ಆಂತರಿಕ ಭದ್ರತೆ ಕಾರ್ಯದರ್ಶಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹೆಗಾರ ವಿಲಿಯಮ್ ಬ್ರಯಾನ್ ಅವರು ಘೋಷಿಸಿದ್ದಾರೆ. ''ವಸ್ತುಗಳ ಮೇಲಿರುವ ಹಾಗೂ ಗಾಳಿಯಲ್ಲಿರುವ ಕೊರೋನ ವೈರಸ್‌ಗಳನ್ನು ಕೊಲ್ಲುವ ಸಾಮರ್ಥ್ಯ ಸೂರ್ಯನ ಬೆಳಕಿಗೆ ಇರುವುದು ನಮ್ಮ ಈವರೆಗಿನ ಪ್ರಬಲ ಸಂಶೋಧನೆಯಾಗಿದೆ'' ಎಂದು ವಿಲಿಯಮ್ ಬ್ರಯಾನ್ ತಿಳಿಸಿದ್ದಾರೆ.