ಕಳೆದ 20 ವರ್ಷಗಳಲ್ಲಿಯೇ ಭಾರತದಲ್ಲಿ ಕಡಿಮೆ ವಾಯು ಮಾಲಿನ್ಯ
Published by Siddaram Halli
24 ಏಪ್ರಿಲ್ 2020
ಕಳೆದ 2 ದಶಕಗಳ ಅವಧಿಯಲ್ಲಿ ಭಾರತ ದೇಶದ ವಾತಾವರಣದಲ್ಲಿ ಅತ್ಯಂತ ಕಡಿಮೆ ಮಟ್ಟದ ವಾಯು ಮಾಲಿನ್ಯ ದಾಖಲಾಗಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ 'ನಾಸಾ' ತಿಳಿಸಿದೆ.
ಕೋವಿಡ್-19 ಸೋಂಕಿನಿಂದ ದೇಶದಲ್ಲಿ ವಿಧಿಸಿರುವ ಲಾಕ್‌ಡೌನ್ ನಿಂದಾಗಿ ಎಲ್ಲ ರೀತಿಯ ಚಟುವಟಿಕೆಗಳು ಸ್ಥಗಿತಗೊಂಡ ಹಿನ್ನಲೆ ಭಾರತದ ಉತ್ತರ ಭಾಗದಲ್ಲಿ ಕಳೆದ 20 ವರ್ಷಗಳಲ್ಲೇ 'ಏರೋಸಾಲ್'ಗಳ ಮಟ್ಟ ತೀವ್ರ ಕುಸಿತ ಕಂಡ ಹಿನ್ನಲೆ ಕಡಿಮೆ ವಾಯುಮಾಲಿನ್ಯ ದಾಖಲಾಗಿರುವುದಾಗಿ ಅಧ್ಯಯನ ವರದಿ ತಿಳಿಸಿದೆ.