ರಾಜ್ಯ ಸರ್ಕಾರದಿಂದ 'ಮಕ್ಕಳ ವಾಣಿ' ಯುಟ್ಯೂಬ್ ಚಾನೆಲ್ ಆರಂಭ
Published by Basavaraj Halli
16 ಏಪ್ರಿಲ್ 2020
ರಾಜ್ಯ ಲೊಕ್ಡೌನ್ ವಿಧಿಸಿರುವ ಈ ಸಂದರ್ಭದಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಮನೆಯಲ್ಲಿರುವ ಮಕ್ಕಳನ್ನು ತಲುಪಲು ಒಂದು ನೂತನ ಯುಟ್ಯೂಬ್ ಚಾನೆಲ್ "ಮಕ್ಕಳ ವಾಣಿ" ಅನ್ನು ಆರಂಭಿಸಿದೆ.
ಬೇಸಿಗೆ ರಜೆಯ ಕಾರಣ ಮನೆಯಲ್ಲಿರುವ ಮಕ್ಕಳಿಗೆ ಕತೆ, ಹಾಡು, ಚಿತ್ರ ಕಲೆ, ಸಂಗೀತ, ಕಿರು ನಾಟಕ, ಕ್ರಾಫ್ಟ್, ಒಗಟು, ಗಾದೆ, ಮ್ಯಾಜಿಕ್, ಪದಬಂಧ ಇತ್ಯಾದಿಗಳ ವಿಷಯಗಳನ್ನು ಯುಟ್ಯೂಬ್ ವಿಡಿಯೋಗಳ ಮೂಲಕ ತಲುಪಿಸಿ ಮಕ್ಕಳನ್ನು ರಂಜಿಸಲು ಈ ಯುಟ್ಯೂಬ್ ಚಾನೆಲ್ 'ಮಕ್ಕಳ ವಾಣಿ'ಗೆ ಚಾಲನೆ ನೀಡಲಾಗಿದೆ.