KVIC ಯಿಂದ ಎರಡು ಪದರಗಳ ಮುಖಗವಸುಗಳ(Mask) ಅಭಿವೃದ್ಧಿ
Published by Basavaraj Halli
13 ಏಪ್ರಿಲ್ 2020
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು(KVIC) ಎರಡು ಪದರುಗಳನ್ನು ಹೊಂದಿದ ಖಾದಿ ಮುಖಗವಸುಗಳನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ಈ ಮುಖಗವಸುಗಳನ್ನು ಬೇಡಿಕೆಗೆ ತಕ್ಕಂತೆ
ಬಾರಿ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ.
ಎರಡು ಪದರದ ಖಾದಿ ಮುಖವಾಡಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಇತ್ತೀಚೆಗೆ, ಜಮ್ಮು ಕಾಶ್ಮೀರ ಸರ್ಕಾರವೊಂದೇ 7.4 ಲಕ್ಷದಷ್ಟು ಬೇಡಿಕೆಯನ್ನು KVIC ಗೆ ಸಲ್ಲಿಸಿದೆ.
* ಈ ಮಾಸ್ಕುಗಳು 70% ತೇವಾಂಶವನ್ನು ಹೀರಿಕೊಳ್ಳುತ್ತವೆ ಮತ್ತು ಗಾಳಿಗೆ ಸುಲಭವಾದ ಮಾರ್ಗವನ್ನು ಒದಗಿಸುತ್ತದೆ.
* ಈ ಮಾಸ್ಕುಗಳನ್ನು ತಯಾರಿಸಲು ಬಳಸುವ ಬಟ್ಟೆಯು ಕೈಯಿಂದ ತಿರುಗಿಸಲ್ಪಟ್ಟಿದೆ
* ಈ ಮಾಸ್ಕುಗಳನ್ನು ತೊಳೆಯಬಹುದು, ಜೈವಿಕ ವಿಘಟನೀಯ ಮತ್ತು ಮರುಬಳಕೆ ಮಾಡಬಹುದಾಗಿದೆ.