ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಆರಂಭಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ವೆಬ್ ಪೋರ್ಟಲ್ ಆರಂಭ
Published by Basavaraj Halli
12 ಏಪ್ರಿಲ್ 2020
ನವದೆಹಲಿ: ಭಾರತದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ದೇಶದ ಎಲ್ಲ ಶಾಲಾ-ಕಾಲೇಜುಗಳನ್ನು ತಾತ್ಕಾಲಿಕವಾಗಿ ಬಂದ ಮಾಡಲಾಗಿದ್ದು ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದೆಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಅಭ್ಯಾಸ ಪರಿಕರಗಳು (ಸ್ಟಡಿ ಮೆಟೀರಿಯಲ್) ಮತ್ತು ವೆಬ್ ಪೋರ್ಟಲ್ನ್ನು ಬಿಡುಗಡೆ ಮಾಡುತ್ತಿದೆ. E-Learning (ಇ-ಕಲಿಕೆ) ಮೂಲಕ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರೆಸಬಹುದಾಗಿದೆ.