ಶುಕ್ರವಾರ, 03 ಎಪ್ರಿಲ್ 2020
8:04 ಅಪರಾಹ್ನ
Daily PDF
ಕೊರೊನಾ ವಿರುದ್ದ ಹೋರಾಟ ಭಾರತಕ್ಕೆ $ 1 ಬಿಲಿಯನ್ ನೆರವು ನೀಡಿದ ವಿಶ್ವಬ್ಯಾಂಕ್
Authored by:
Basavaraj Halli
ಕರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ ವಿಶ್ವ ಬ್ಯಾಂಕ್ $ 1 ಬಿಲಿಯನ್ (ಅಮೆರಿಕನ್ ಡಾಲರು) ಮೊತ್ತದ ತುರ್ತುನಿಧಿಯ ಸಹಾಯವನ್ನು ನೀಡಿದೆ.
ವಿಶ್ವ ಬ್ಯಾಂಕ್ ಒಟ್ಟು 1.9 ಶತಕೋಟಿ ಡಾಲರ್ ಮೊತ್ತದಷ್ಟು ಮೊತ್ತವನ್ನು ಮೊದಲ ಹಂತವಾಗಿ 25 ದೇಶಗಳಿಗೆ ನೀಡಲಿದೆ. ವಿಶ್ವ ಬ್ಯಾಂಕ್ ನೀಡುವ ಈ ಹಣವನ್ನು ಬಳಸಿಕೊಂಡು ಕೊರೊನವನ್ನು ನಿಯಂತ್ರಿಸಲು ನೆರವು ಪಡೆಯುವ ರಾಷ್ಟ್ರಗಳಿಗೆ ಮನವಿ ಮಾಡಿದೆ.
* ವಿಶ್ವ ಬ್ಯಾಂಕ್ ನಿಂದ ಪಾಕಿಸ್ತಾನಕ್ಕೆ 200 ಮಿಲಿಯನ್, ಅಫ್ಘಾನಿಸ್ತಾನಕ್ಕೆ 100 ಮಿಲಿಯನ್, ಮಾಲ್ಡೀವ್ಸ್ಗೆ 3 7.3 ಮಿಲಿಯನ್ ಮತ್ತು ಶ್ರೀಲಂಕಾಕ್ಕೆ 8 128.6 ಮಿಲಿಯನ್ ತುರ್ತುನಿಧಿ ಘೋಷಿಸಲಾಗಿದೆ.