ಶುಕ್ರವಾರ, 03 ಎಪ್ರಿಲ್ 2020
11:37 ಪೂರ್ವಾಹ್ನ
Daily PDF
ಕೇಂದ್ರ ಕೃಷಿ ಸಚಿವಾಲಯ ಪ್ರಾರಂಭಿಸಿದ ಹೊಸ ಇ-ನಾಮ್(E-Nam) ವಿಶೇಷತೆಗಳು
Authored by:
Basavaraj Halli
ಕೇಂದ್ರ ಸರ್ಕಾರದ ಕೃಷಿ ಸಚಿವಾಲಯವು ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದ್ದು, ಇದು ರೈತರ ಕೃಷಿ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
COVID-19 ವಿರುದ್ಧ ಹೋರಾಡುತ್ತಿರುವ ಈ ಸಮಯದಲ್ಲಿ ಮಂಡಿಗಳಲ್ಲಿ ಉಂಟಾಗುವ ಜನ ದಟ್ಟಣೆಯನ್ನು ಕಡಿಮೆ ಮಾಡಲು ಈ ವ್ಯವಸ್ಥೆ ಸಹಕರಿಸಲಿದೆ.
ಇ-ನಾಮ್:
* ಗೋದಾಮು ಆಧಾರಿತ ವಹಿವಾಟುಗಳನ್ನು ಗೋದಾಮುಗಳಿಂದಲೇ ವ್ಯಾಪಾರಕ್ಕೆ ಅನುಕೂಲವಾಗುತ್ತವೆ. ಇದರಿಂದ ವೆಚ್ಚವನ್ನು ಉಳಿಸಬಹುದಾಗಿದೆ.
* ಈ ನೂತನ ವ್ಯವಸ್ಥೆಯಡಿಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ರಾಷ್ಟ್ರದಾದ್ಯಂತ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾಗಿದೆ, ಮತ್ತು ಪೂರೈಕೆ ಮತ್ತು ಬೇಡಿಕೆಯನ್ನು ಸಮಾಂತರಗೊಳಿಸಿ ಬೆಲೆಗಳನ್ನು ಸ್ಥಿರವಾಗಿಸುತ್ತದೆ.
* ಅಂತರ-ರಾಜ್ಯ ಮತ್ತು ಅಂತರ-ಮಂಡಿ ವ್ಯಾಪಾರಕ್ಕಾಗಿ ಟ್ರ್ಯಾಕ್ ಮಾಡಬಹುದಾದ ಸಾರಿಗೆ ಸೌಲಭ್ಯಗಳು.