ಸೋಮವಾರ, 30 ಮಾರ್ಚ್ 2020
11:33 ಪೂರ್ವಾಹ್ನ
Daily PDF
ಮುಂಬೈನಲ್ಲಿ ಜನಸಂದಣಿಯನ್ನು ತಡೆಗಟ್ಟಲು APMC ಯಿಂದ ಮಾರ್ಗಸೂಚಿ ಬಿಡುಗಡೆ
Authored by:
Basavaraj Halli
ದೇಶಾದ್ಯಂತ ಕರೋನ ವೈರಸ್ ಭೀತಿಯಿಂದ ಹೇರಲಾಗಿರುವ ಲಾಕ್-ಡೌನ್'ನಿಂದಾಗಿ ಮುಂಬೈನ ಮಾರುಕಟ್ಟೆಗಳಲ್ಲಿ ಉಂಟಾಗಬಹುದಾದ ಜನಸಂದಣಿಯನ್ನು ತಡೆಗಟ್ಟಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. APMCಯಲ್ಲಿನ ತರಕಾರಿ ವ್ಯಾಪಾರಿಗಳು ಕರೋನ ವೈರಸ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ತಮ್ಮ ದೈನಂದಿನ ವಹಿವಾಟು ನಿಲ್ಲಿಸಿರುವುದರಿಂದ APMC ಸಮಿತಿಯು ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.