ಶುಕ್ರವಾರ, 27 ಮಾರ್ಚ್ 2020
12:01 ಅಪರಾಹ್ನ
Daily PDF
ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧ ಎಪ್ರಿಲ್ 14 ರವರೆಗೆ ಮುಂದೂಡಿಕೆ
Authored by:
Basavaraj Halli
ಹೊಸದಿಲ್ಲಿ: ದೇಶದಲ್ಲಿ ವ್ಯಾಪಿಸುತ್ತಿರುವ ಕೊರೋನವೈರಸ್ ಭೀತಿ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧ ಎಪ್ರಿಲ್ 14ರವರೆಗೆ ಮುಂದುವರೆಸುವದಾಗಿ ಕೇಂದ್ರ ಸರಕಾರ ಘೋಷಿಸಿದೆ. ಈ ಮುಂಚೆ ಒಂದು ವಾರದ ಅವಧಿಗೆ ವಿಧಿಸಿದ್ದ ನಿಷೇಧವನ್ನು ಈಗ ಮತ್ತೆ ಮುಂದೂಡಿ ಏಪ್ರಿಲ್ 14 ವರೆಗೂ ವಿಸ್ತರಿಸಲಾಗಿದೆ.
ಇನ್ನುಳಿದಂತೆ ದೇಶಿಯ ವಿಮಾನಗಳ ಮೇಲೆ ದಿನಾಂಕ ಮಾರ್ಚ್ 31ರವರೆಗೆ ನಿಷೇಧ ಹೇರಲಾಗಿದೆ.